ಬೆಂಗಳೂರು : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿಬಿ ಲಂಚಬಾಕ ಅಧಿಕಾರಿಯನ್ನು ಬಲೆಗೆ ಕೆಡವಿದೆ. ಜಿಲ್ಲಾಧಿಕಾರಿ ಮಂಜುನಾಥ್ ಜೊತೆಯಲ್ಲಿ ಕರ್ತ್ಯವ್ಯವನ್ನು ನಿರ್ವಹಿಸುತ್ತಿದ್ದ ಉಪ ತಹಸೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚೇತನ್ ಕುಮಾರ್ ಅಲಿಯಾಸ್ ಚಂದ್ರು ಐದು ಲಕ್ಷ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಟ್ರ್ಯಾಪ್ ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಆಜಾಂ ಪಾಷ ಎಂದುವವರು ಕೊಟ್ಟ ದೂರಿನ ಮೇರೆಗೆ ಎಸಿಬಿ ಟ್ರ್ಯಾಪ್ ಮಾಡಿದೆ. ಜಮೀನಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯ ತೀರ್ಪು ನೀಡಿದ್ದು ಡಿಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ. ಈ ಕೇಸ್ ಫೈಲ್ ಅನ್ನು ಕ್ಲಿಯರ್ ಮಾಡುವ ಸಲುವಾಗಿ ಐದು ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತಂತೆ. ಆರೋಪಿಗಳು 5 ಲಕ್ಷವನ್ನು ಲಂಚವಾಗಿ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.
ದೂರುದಾರ ಆಜಾಂ ಪಾಷನ ಆರೋಪವೇನು..?
“”ನನ್ನ ಜಮೀನಿಗೆ ಸಂಬಂಧಿಸಿದಂತೆ ಕೇಸ್ ಕೋರ್ಟ್ ನಲ್ಲಿತ್ತು. ನಾನು ಎರಡು ಸಲ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದೇನೆ. ಜಿಲ್ಲಾಧಿಕಾರಿ ಮಂಜುನಾಥ್ ರವರೇ ಮಹೇಶ್ ರನ್ನು ಭೇಟಿಯಾಗುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ ಉಪತಹಸೀಲ್ದಾರ್ ಮಹೇಶ್‌ರನ್ನು ಭೇಟಿಯಾಗಿದ್ದೆ. ಮಹೇಶ್ ರವರು ಜಿಲ್ಲಾಧಿಕಾರಿಯವರ ಸೂಚನೆಯಂತೆ ನನ್ನ ಫೈಲ್ ಕ್ಲಿಯರ್ ಮಾಡಲು ಐದು ಲಕ್ಷ ಲಂಚದ ಹಣವನ್ನು ಕೇಳಿದ್ದರು. ಈ ಸಂಬಂಧ ಎಿಬಿಗೆ ದೂರನ್ನು ನೀಡಿದ್ದೆ ಎಂದು ದೂರುದಾರ” ಆಜಾಂಪಾಷ ತಿಳಿಸಿದ್ದಾರೆ.
ದೂರುದಾರರ ಆರೋಪಗಳಿಗೆ ಜಿಲ್ಲಾಧಿಕಾರಿಗಳ ಉತ್ತರವೇನು..?
ಜಿಲ್ಲಾಧಿಕಾರಿ ಮಂಜುನಾಥ್‌ರವರು ದೂರುದಾರರ ಆರೋಪವನ್ನು ತಳ್ಳಿ ಹಾಕಿದ್ದಾರೆ. ನನಗೂ ಉಪತಹಸೀಲ್ದಾರ್ ಲಂಚಕ್ಕೂ ಸಂಬಂಧವಿಲ್ಲ. ದೂರುದಾರರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.
ಭ್ರಷ್ಟರನ್ನು ಬಂಧಿಸಿ ವಿಚಾರಣೆ
ಎಸಿಬಿ ಅಧಿಕಾರಿಗಳು ಪ್ರಮುಖವಾಗಿ ಮೂರು ವಿಚಾರವನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ದೂರುದಾರನಿಗೆ ಯಾರು ಹಣಕ್ಕಾಗಿ ಡಿಮ್ಯಾಂಡ್(demand) ಮಾಡಿದ್ದರು. ಜಮೀನಿನ ಕೆಲಸವನ್ನು ಯಾವ ವಿಚಾರದ ಹಿನ್ನೆಲೆಯಲ್ಲಿ ಬಾಕಿ ಇಡಲಾಗಿತ್ತು ಅಂದರೆ ವರ್ಕ್ ಪೆಂಡಿಂಗ್( work pending) ಮಾಡಲಾಗಿತ್ತು. ಇನ್ನು ಸ್ವೀಕರಿಸಿದ್ದು ಯಾರು ಯಾಕೆ ಎಂಬ ಆಧಾರದಲ್ಲಿ ಎಸಿಬಿ ತನಿಖೆಯನ್ನು ನಡೆಸುತ್ತಿದೆ. ಸದ್ಯ ಉಪತಹಸೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚಂದ್ರುವನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.