ನವದೆಹಲಿ : ಇಂದು ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ದ್ವಿತೀಯ ವಾರ್ಷಿಕ ಪುಣ್ಯಸ್ಮರಣೆ.
ರಾಜಧಾನಿ ದೆಹಲಿಯ ಶಕ್ತಿಸ್ಥಳದಲ್ಲಿರುವ ಸುದೈವ್ ಅಟಲ್ ಸ್ಮಾರಕಕ್ಕೆ ತೆರಳಿದ ಗಣ್ಯಾತಿಗಣ್ಯರು ಮಾಜಿ ಪ್ರಧಾನಿಗೆ ಪುಷ್ಪ ನಮನ ಸಲ್ಲಿಸಿದರು.
ದೇಶದ ಪ್ರಗತಿಗಾಗಿ ಅಟಲ್ ಅವರ ಅಮೂಲ್ಯ ಸೇವೆ ಮತ್ತು ಸಾಧನೆಗಳನ್ನು ದೇಶವು ಸ್ಮರಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಅನೇಕ ಗಣ್ಯರು ಅಟಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.