ಗೋಕಾಕ : ತಾಲೂಕಿನ ಮಿಡಕನಹಟ್ಟಿ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ ಪ್ರಕರಣದಲ್ಲಿ ಗೋಕಾಕ ಗ್ರಾಮೀಣ ಠಾಣಾ ಪೊಲೀಸರು 2 ಆರೋಪಿತರನ್ನು ಬಂಧಿಸಿದ್ದು, ಅವರಿಂದ ಕಳ್ಳತನ ಮಾಡಿದ 80ಗ್ರಾಂ ಬಂಗಾರದ ಆಭರಣಗಳು ಕಳ್ಳತನ ಮಾಡಿ ಬಂದ ಹಣದಿಂದ ತೆಗೆದುಕೊಂಡ ವಾಹನ & ಕಳ್ಳತನಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕಃ 29/04/2025 ರಂದು ಮುಂಜಾನೆ 11.30 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯ ನಡುವಿನ ವೇಳೆಯಲ್ಲಿ ಕಳ್ಳರು ಗೋಕಾಕ ತಾಲ್ಲೂಕಿನ ಮಿಡಕನಹಟ್ಟಿ ಗ್ರಾಮದಲ್ಲಿ ಮಹಾದೇವ ಪಂಡಪ್ಪ ಸವಸುದ್ದಿ, ಇವರ ಮನೆಯ ಮುಂಬಾಗಿಲದ ಕೀಲಿ ಕೊಂಡಿಯನ್ನು ಮುರಿದು ಮನೆಯ ಒಳಗೆ ಹೋಗಿ ಟ್ರೇಜರಿಯ ಬಾಗಿಲನ್ನು ಮುರಿದು ತೆಗೆದು ಅದರಲ್ಲಿ ಇಟ್ಟಿದ್ದ ಸುಮಾರು 150 ಗ್ರಾಂ ತೂಕಿನ ಬಂಗಾರದ ಆಭರಣಗಳು ಅ.ಕಿ. 9,75,000=00 ರೂ ಮತ್ತು ನಗದು ಹಣ 20,000=00 ಇವುಗಳನ್ನು ಕಳುವು ಮಾಡಿಕೊಂಡು ಹೋಗಿದ್ದರ ಪ್ರಕರಣ ದಾಖಲಾಗಿತ್ತು
ಸದರ ಪ್ರಕರಣದ ಪತ್ತೆ ಕುರಿತು ಬೆಳಗಾವಿ ಎಸ್ಪಿ ಡಾ|| ಭೀಮಾಶಂಕರ ಎಸ್ ಗುಳೇದ, ಪ್ರಕರಣದ ಪತ್ತೆಗಾಗಿ ಸಿಪಿಐ ಸುರೇಶಬಾಬು ಆರ್ ಬಿ, ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತನಿಖಾ ತಂಡವು ಹೆಚ್ಚುವರಿ ಎಸ್ಪಿ ಗಳಾದ ಶೃತಿ ಎನ್ ಎಸ್, ರಾಮಗೊಂಡ ಬಿ ಬಸರಗಿ ಡಿವಾಎಸ್ಪಿ ರವಿ ಡಿ. ನಾಯ್ಕ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣದ ತನಿಖೆ ಕೈಕೊಂಡು ದಿನಾಂಕ: 05/06/2025 ರಂದು ಇಬ್ಬರು ಆರೋಪಿತರಾದ ಬೈಲಹೊಂಗಲ ತಾಲೂಕಿನ ಮೊಹರೆ ಗ್ರಾಮದ ರಾಮಚಂದ್ರ @ ರಾಮಸಿದ್ದ ಫಕೀರಪ್ಪ ತಳವಾರ, ಕೊಳ್ಳಾನಟ್ಟಿ ಗ್ರಾಮದ ನಾಗರಾಜ ಶಿವಲಿಂಗ ಮ್ಯಾಗೇರಿ ಇವರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸದರಿ ಆರೋಪಿತರು ಪ್ರಕರಣದಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಸದರಿ ಪ್ರಕರಣದಲ್ಲಿ ವಶ ಪಡಿಸಿಕೊಂಡ ವಸ್ತುಗಳಾದ ಬಂಗಾರದ ನಕ್ಷೇಸ್-1, ಬಂಗಾರದ ಚೈನ್‌ಗಳು-2, ಬಂಗಾರದ ಪಾಟ್ಲಗಳು (ಬಳೆಗಳು)-2 ಹೀಗೆ ಒಟ್ಟು ತೂಕ- 80 ಗ್ರಾಂ., ಕಳುವು ಮಾಡಿದ ಬಂಗಾರದ ಆಭರಣಗಳನ್ನು ಮಾರಾಟ ಮಾಡಿ ಅದರಿಂದ ಪಡೆದುಕೊಂಡ ಹಣದಿಂದ ಖರೀದಿಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರ, ಅಪರಾಧ ಕೃತ್ಯಕ್ಕೆ ಉಪಯೋಗಿಸಿದ ಹಿರೋ ಎಚ್.ಎಫ್ ಮೋಟರ ಸೈಕಲ, ಅಪರಾಧ ಕಾಲಕ್ಕೆ ಉಪಯೋಗಿಸಿದ 2 ಮೋಬೈಲಗಳು-ಈ ಪ್ರಕಾರವಾಗಿ ಸದರ ಪ್ರಕರಣದಲ್ಲಿ ಒಟ್ಟು ಅ:ಕಿ: 7,30,000=00 ರೂಪಾಯಿ ಕಿಮ್ಮತ್ತಿನ ಆಭರಣಗಳು ಮತ್ತು ವಾಹನಗಳು ಹಾಗೂ ಮೊಬೈಲಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸದರ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಾದ ಪಿಎಸ್‌ಐ (ಕಾ&ಸು) ಕಿರಣ್ ಮೋಹಿತೆ ಹಾಗೂ ಹೆಚ್ಚುವರಿ ಪಿಎಸ್ಐ ಶ್ರೀಮತಿ ಎಲ್ ಎಲ್ ಪತ್ತೆನ್ನವರ ಮತ್ತು ಸಿಬ್ಬಂದಿ ಜನರಾದ ಬಿ ವಿ ನೆರ್ಲಿ, ಕುಮಾರ ಪವಾರ, ಜಗದೀಶ ಗುಡ್ಲಿ, ಮಾರುತಿ ಪಡದಲ್ಲಿ, ಆರ್ ಕೆ ಉದಪುಡಿ, ಡಿ ಜಿ ಕೊಣ್ಣೂರ, ಎನ್ ಎಲ್ ಮಂಗಿ, ಡಿ ಬಿ ಅಂತರಗಟ್ಟಿ, ಎಮ್ ಬಿ ನಾಯಿಕವಾಡಿ, ಎಚ್ ಡಿ ಗೌಡಿ, ವಿ ಎಲ್ ನಾಯ್ಕವಾಡಿ, ವಿಠಲ ಖೋತ್, ಎನ್ ಜಿ ದುರದುಂಡಿ, ಎಸ್ ಬಿ ಮಾನೆಪ್ಪಗೋಳ, ಶಿವಾನಂದ ಕಲ್ಲೋಳಿ, ಪಿ ಎಸ್ ಕಾಡಗಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರು ಯಶಸ್ವಿಯಾಗಿದ್ದಾರೆ.