Breaking News

ರಾಜ್ಯಾದ್ಯಂತ ಕಾವೇರಿ 2.0 ತಂತ್ರಾಂಶ ಸಮಸ್ಯೆ ಕ್ಲಿಯರ್ : ಇಂದಿನಿಂದ ಎಂದಿನಂತೆ ನೋಂದಣಿ


ರಾಜ್ಯದಲ್ಲಿನ ಆಸ್ತಿ ದಸ್ತಾವೇಜು ನೋಂದಣಿ ಪ್ರಕ್ರಿಯೆ ಹಾಗೂ ಇಸಿ/ಸಿಸಿ ಸೇವೆ ನೀಡುವ ಕಾವೇರಿ 2.0 ತಂತ್ರಾಂಶದಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಏಳನೇ ಸಾರ್ವಜನಿಕರು ಪರದಾಡುವಂತಾಗಿದೆ.ಕಳೆದ ಒಂದು ವಾರದಿಂದ ಇದ್ದ ಸರ್ವರ್ ಸಮಸ್ಯೆ ಬುಧವಾರವೂ ಮುಂದುವರೆದಿದ್ದು, ಬೆಳಗ್ಗೆಯೂ ಕಾವೇರಿ 2.0 ತಂತ್ರಾಂಶದ ನಾಗರಿಕರ ಲಾಗಿನ್ ತೆರೆದುಕೊಳ್ಳಲಿಲ್ಲ.

ಉಪ ನೋಂದಣಾಧಿಕಾರಿಗಳ ಲಾಗಿನ್ ತೆರೆದು ಕೊಂಡಿದ್ದರೂ ತಾಂತ್ರಿಕ ಸಮಸ್ಯೆ ಮುಂದು ವರೆದಿದ್ದರಿಂದಗೊಂದಲಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಆದರೆ ಸಂಜೆ ವೇಳೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನೀಗ ಪೂರ್ಣ ಪುನಃಸ್ಥಾಪಿಸಲಾಗಿದೆ ಎಂದಿದ್ದಾರೆ.

ಕಳೆದ 1 ವಾರದಿಂದ DDoS ದಾಳಿಯಿಂದ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶ ಈಗ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಮತ್ತು ಈ ತಂತ್ರಾಂಶ ಇದೀಗ ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು EC/CC ಸೇವೆಗಳ ಮೇಲೆ ಪರಿಣಾಮ ಉಂಟಾಗಿತ್ತು.

ಇದು ಆದಾಯ ಸಂಗ್ರಹವನ್ನು ಮತ್ತಷ್ಟು ಕಡಿಮೆ ಮಾಡಿತು. ಇಂತಹ ಅನಿರೀಕ್ಷಿತ ದಾಳಿಗಳನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಗ್ಗಿಸಲು ವರ್ಧಿತ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಮತ್ತು ಅರ್ಜಿಯನ್ನು ರಕ್ಷಿಸಲು ಇ-ಆಡಳಿತ ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ತಾಂತ್ರಿಕ ದಾಳಿಯ ಕಾರಣಕ್ಕೆ ಫೆಬ್ರವರಿ 1, 2025 ರಂದು ತಂತ್ರಾಂಶದ ಮೇಲೆ ವ್ಯತಿರೀಕ್ತ ಪರಿಣಾಮ ಉಂಟಾಗಿತ್ತು. ಪರಿಣಾಮ ನೋಂದಣಿಗಳ ಸಂಖ್ಯೆ 556 ಕ್ಕೆ ಇಳಿದಿತ್ತು. ಸಹಿ ಮಾಡಿದ ಇಸಿ (ಋಣಭಾರ ಪ್ರಮಾಣ ಪತ್ರ) ಸಂಖ್ಯೆ 1649 ಮತ್ತು ನೀಡಲಾದ ಸಿಸಿ ಸಂಖ್ಯೆ 405 ಆಗಿದ್ದು, 15,18,72,565.45 ರೂ. ಆದಾಯ ಸಂಗ್ರಹವಾಗಿದೆ.

ಫೆಬ್ರವರಿ 3 ರಂದು ಮಧ್ಯಂತರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಹೀಗಾಗಿ ನೋಂದಣಿಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಸುಧಾರಿಸಿತು. ಪರಿಣಾಮ 5243 ನೋಂದಣಿಗಳಾಗಿದ್ದರೆ, 3525 ಇಸಿ ಗಳನ್ನು ಸಹಿ ಮಾಡಿದ್ದು, 652 ಸಿಸಿ ಗಳನ್ನು ನೀಡಲಾಗಿತ್ತು. ರೂ. 52,24,42,289.78 ಆದಾಯ ಸಂಗ್ರಹವಾಗಿತ್ತು.

ಫೆಬ್ರವರಿ 4 ರಂದು, ಅರ್ಜಿಗಳ ಸಂಖ್ಯೆ ಮತ್ತೊಮ್ಮೆ ಕಡಿಮೆಯಾಗಲಾರಂಭಿಸಿತು. ವಿವರವಾದ ವಿಶ್ಲೇಷಣೆಯ ನಂತರ ಅರ್ಜಿಗಳನ್ನು ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ಜಾರಿಗೆ ತರಲಾಯಿತು. ಪರಿಣಾಮ ತಂತ್ರಾಂಶದ ಕಾರ್ಯಕ್ಷಮತೆ ಸುಧಾರಿಸಿತು. 1657 ನೋಂದಣಿಗಳು ದಾಖಲಾಗಿದ್ದು, ಇಸಿ 7327 ಮತ್ತು ನೀಡಲಾದ ಸಿಸಿಗಳು 977 ಆಗಿದೆ. ರೂ 17,13,86,591.75 ಆದಾಯ ಸಂಗ್ರಹವಾಗಿದೆ.

ಪ್ರಸ್ತುತ ಅಂಕಿಅಂಶಗಳು (ಫೆಬ್ರವರಿ 5, 2025 ರಂದು ಸಂಜೆ 4:00 ಗಂಟೆಗೆ):

* ಒಟ್ಟು ನೋಂದಣಿಗಳು: 7,225

* EC : 3903

* CC : 753

* ಒಟ್ಟು ಆದಾಯ ಸಂಗ್ರಹ: ರೂ 62,59,69,340

ಡಿಸೆಂಬರ್ 2024 ರ ತಿಂಗಳಲ್ಲಿ ಸರಾಸರಿ ಅಂಕಿಅಂಶಗಳ ಪ್ರಕಾರ 7,721 ನೋಂದಣಿಗಳು ದಾಖಲಾಗಿತ್ತು. ರೂ. 62,93,54,917 ಆದಾಯ ಸಂಗ್ರಹವಾಗಿತ್ತು.ನೋಂದಣಿ ಚಟುವಟಿಕೆಗಳು ಸಾಮಾನ್ಯ ಮಟ್ಟಕ್ಕೆ ಮರಳಿದೆ ಎಂದು ಈ ಸಂಖ್ಯೆಗಳು ಸ್ಪಷ್ಟವಾಗಿ ಸೂಚಿಸುತ್ತವೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ಅಜೀತ ಮನ್ನಿಕೇರಿ ಅವರ ಅವಿರತ ಪ್ರಯತ್ನದಿಂದ ಮೂಡಲಗಿ ಶೈಕ್ಷಣಿಕ ವಲಯವು ರಾಜ್ಯ- ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ- ಶಾಸಕ ಬಾಲಚಂದ್ರ ಜಾರಕಿಹೊಳಿ*

*ತಿಗಡಿ ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಅದ್ದೂರಿಯಾಗಿ ನಡೆದ ತಾಲ್ಲೂಕು ಮಟ್ಟದ ಗುರು ಸ್ಮರಣೆ ಕಾರ್ಯಕ್ರಮ* *ಡಿಡಿಪಿಐ ಆಗಿ ಪದೋನ್ನತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ