ಗೋಕಾಕ್ – ಮಾಜಿ ಪ್ರಧಾನಿ, ಭಾರತರತ್ನ ಡಾ. ಮನ್ ಮೋಹನ್ ಸಿಂಗ್ ಅವರ ನಿಧನಕ್ಕೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶೋಕ ವ್ಯಕ್ತಪಡಿಸಿದ್ದಾರೆ.
ಇವರ ನಿಧನದಿಂದ ಭಾರತದ ಹಿರಿಯ ಮುತ್ಸದ್ದಿಯನ್ನು ಕಳೆದುಕೊಂಡಿದೆ. ಮೃದು ಸ್ವಭಾವದ ಅರ್ಥಿಕ ತಜ್ಞರಾಗಿದ್ದ ಸಿಂಗ್ ಅವರ ನಿಧನದಿಂದ ನಮ್ಮ ದೇಶಕ್ಕೆ ಅಪಾರ ಹಾನಿಯಾಗಿದೆ. ಸುಮಾರು ೧೦ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ನಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಅವರು ಭಾಜನರಾಗಿದ್ದರು ಎಂದು ಡಾ. ಸಿಂಗ್ ಅವರ ಕೊಡುಗೆಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಮರಿಸಿಕೊಂಡು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.