Breaking News

*ಮೆಳವಂಕಿ- ಹಳೆಯ ವಿದ್ಯಾರ್ಥಿಗಳ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ೨೦ ಲಕ್ಷ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾನ*


*ಗೋಕಾಕ*- ಮೆಳವಂಕಿ ಗ್ರಾಮದ ಹಳೆ ವಿದ್ಯಾರ್ಥಿಗಳ ಬೇಡಿಕೆಯಂತೆ ತಮ್ಮ ಶಾಸಕರ ನಿಧಿಯಿಂದ ೨೦ ಲಕ್ಷ ರೂ ಗಳನ್ನು ನೀಡುವುದಾಗಿ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಾಗ್ದಾನ ಮಾಡಿದರು.

ತಾಲ್ಲೂಕಿನ ಮೆಳವಂಕಿಯಲ್ಲಿ ಇಚೆಗೆ ನಡೆದ ಸಿದ್ಧಾರೂಢ ಮಠದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಕಲಿತ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಘವನ್ನು ಹುಟ್ಟು ಹಾಕಿರುವದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೆಳವಂಕಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ಲ ಹಳೆಯ ವಿದ್ಯಾರ್ಥಿಗಳು ಕೂಡಿಕೊಂಡು ಸಂಘವನ್ನು ಸ್ಥಾಪಿಸಿರುವ ಕಾರ್ಯವೂ ಸಹ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ. ಸಮಾಜಮುಖಿ ಕಾರ್ಯಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಇದಕ್ಕಾಗಿ ನಾನೂ ಕೂಡ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಹಳೆಯ ವಿದ್ಯಾರ್ಥಿಗಳ ಸ್ಥಿರ ನಿಧಿಗಾಗಿ ೧೦ ಲಕ್ಷ ರೂ, ಡಿಜಿಟಲ್ ಗ್ರಂಥಾಲಯಕ್ಕಾಗಿ ೫ ಲಕ್ಷ ರೂ. ಮತ್ತು ಶೌಚಾಲಯ ನಿರ್ಮಾಣಕ್ಕೆ ೫ ಲಕ್ಷ ರೂ ಸೇರಿದಂತೆ ಒಟ್ಟು ೨೦ ಲಕ್ಷ ರೂ. ಗಳನ್ನು ನೀಡುತ್ತೇನೆಂದು ಅವರು ಭರವಸೆ ನೀಡಿದರು.

ಶಿಕ್ಷಣವೊಂದೇ ಸಮಾಜದ ಬದಲಾವಣೆಗೆ ಪ್ರಬಲ ಅಸ್ತ್ರವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ, ಗ್ರಾಮಕ್ಕೆ ಉತ್ತಮ ಹೆಸರನ್ನು ತರುವಷ್ಟರ ಮಟ್ಟಿಗೆ ಸಾಧನೆ ಮಾಡಬೇಕು. ಅಂದಾಗ ಮಾತ್ರ ಹೆತ್ತವರ ಕಂಡ ಕನಸುಗಳು ನನಸಾಗಲು ಸಾಧ್ಯವಾಗುತ್ತವೆ.ಕಳೆದ ೨೦ ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣ ರಂಗಕ್ಕೆ ಪ್ರಥಮ ಆದ್ಯತೆಯನ್ನು ನೀಡುವ ಮೂಲಕ ಶಿಕ್ಷಣದ ಅಮೂಲಾಗ್ರ ಬದಲಾವಣೆಗಾಗಿ ಶ್ರಮಿಸುತ್ತಿದ್ದೇನೆ. ನಮ್ಮ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಗಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದವರಿಗೆ ಪೈಪೋಟಿ ನೀಡಬೇಕು. ಈ ಮೂಲಕ ನಮ್ಮ ವಿದ್ಯಾರ್ಥಿಗಳು ಎಲ್ಲೆಡೆ ಮಿಂಚಬೇಕು ಎಂಬ ಆಶಯವು ನಮ್ಮದಾಗಿದೆ. ಈ ಮೊದಲು ಅಡಿಬಟ್ಟಿಯಿಂದ ಉದಗಟ್ಟಿತನಕ ಹೋಗುವ (ದಂಡಿನ ಮಾರ್ಗ) ರಸ್ತೆಯು ಭಯಾನಕವಾಗಿರುತ್ತಿತ್ತು. ಆದರೀಗ ಈ ಭಾಗದಲ್ಲೂ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವದರಿಂದ ಕಲಾರಕೊಪ್ಪ ಎಂಬ ಗ್ರಾಮದಲ್ಲಿ ೬ ಜನರು ಪಿಎಸ್‌ಐಗಳಾಗಿ ಸೇವೆ ಸಲ್ಲಿಸುತ್ತಿರುವುದು ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.  

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ೭೦ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಪ್ರೌಢಶಾಲೆಯ ೪ ಕೊಠಡಿಗಳನ್ನು ಉದ್ಘಾಟಿಸಿದರು. ೨೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಿ.ಡಿ.ಪಾಟೀಲ, ಪಿಕಾರ್ಡ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಹಂಜಿ, ಮುಖಂಡರಾದ ಮಹಾದೇವಪ್ಪ ಪತ್ತಾರ, ಪಿಕೆಪಿಎಸ್ ಅಧ್ಯಕ್ಷ ಭೀಮಶೆಪ್ಪ ಭೂಮನ್ನವರ, ಗ್ರಾ.ಪಂ. ಉಪಾಧ್ಯಕ್ಷ ಮಾರುತಿ ಕರೆಪ್ಪನ್ನವರ, ಅಡಿವೆಪ್ಪ ಓನಕಿ, ಅಲ್ಲಪ್ಪ ಕಂಕಣವಾಡಿ, ಭೀಮಶೆಪ್ಪ ಚಿಪ್ಪಲಕಟ್ಟಿ, ಬಸವರಾಜ ಹತ್ತರವಾಟ, ರಮೇಶ ಬೀರನಗಡ್ಡಿ, ಸಣ್ಣ ದೊಡ್ಡಪ್ಪ ಕರೆಪ್ಪಗೋಳ, ಸತ್ತೆಪ್ಪ ಬಬಲಿ, ಯಲ್ಲಪ್ಪ ಕಡಕೋಳ, ನಾಗಪ್ಪ ಮಂಗಿ, ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕ ಈರಣ್ಣ ಕಡಕೋಳ, ಗ್ರಾ.ಪಂ. ಸದಸ್ಯರು, ಪಿಕೆಪಿಎಸ್ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ