ಗೋಕಾಕ : ಇಂಜಿನಿಯರ್ ದಿನ ಅಂಗವಾಗಿ ದೇಶ ಕಂಡ ಅಪ್ರತಿಮ ಇಂಜಿನಿಯರ್, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಆಚರಿಸಲಾಯಿತು.
ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿ ಇಂಜಿನಿಯರ್ ಗಳು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವು ಪಾಟೀಲ್, ಬೆನ್ನಾಡಿ , ವಿನಾಯಕ್ ರಾವುತ್, ದೀಪಿಕ್ ಕೊಟಬಾಗಿ, ರವಿ ಉತ್ತೂರ, ಹಂದಿಗುಂದ, ರವಿ ಕಡಕೊಳ, ವಿವೇಕ ಜತ್ತಿ, ಶ್ರೀರಂಗ ನಾಯಕ, ವಿಜಯ ಜತ್ತಿ, ಶಿವಾಜಿ ಪಾತ್ರೋಟ , ರಾಜು ಹಡಿಗಿನಾಳ, ಚಿದಾನಂದ ದೇಮಶೆಟ್ಟಿ, ವೀರಣ್ಣಾ ಹುದ್ದಾರ, ಸೋಗಲಿ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.