Breaking News

*ದಿ. ಶ್ರೀ ದುಂಡಪ್ಪ ಮಲ್ಲಪ್ಪ ಚೌಕಶಿ ಯವರ “8ನೇ ಪುಣ್ಯ ಸ್ಮರಣೆ” ನಿಮಿತ್ಯ ಐಚ್ಚಿಕ ರಕ್ತದಾನ ಶಿಬಿರ*


ಗೋಕಾವಿ ನಾಡಿನ ಧೀಮಂತ ನಾಯಕ, ರಾಜಕೀಯ, ಸಹಕಾರಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಲ್ಲಿ ತಮ್ಮದೆ ಆದ ಚಾಪು ಮೂಡಿಸಿದ್ದ ಉಪ್ಪಾರ್ ಸಮಾಜದ ಹಿರಿಯ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯರು ಹಾಗೂ ಪ್ರಭಾಶುಗರ್ ನಿರ್ದೇಶಕರಾಗಿದ್ದ ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮದ ದಿವಂಗತ ಶ್ರೀ ದುಂಡಪ್ಪ ಮಲ್ಲಪ್ಪ ಚೌಕಶಿ ಯವರ “8ನೇ ಪುಣ್ಯ ಸ್ಮರಣೆ” ನಿಮಿತ್ಯವಾಗಿ ಐಚ್ಚಿಕ ರಕ್ತದಾನ ಶಿಬಿರವನ್ನು ರೋಟರಿ ರಕ್ತ ಭಂಡಾರ ಹಾಗೂ ರೋಟರಿ ಸೇವಾ ಸಂಘ ಗೋಕಾಕ್ ಹಾಗೂ ಡಿ ಎಂ ಚೌಕಶಿ ಪ್ರತಿಷ್ಠಾನಗಳ ಜಂಟಿ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ 108 ಜನ ಚೌಕಶಿ ಕುಟುಂಬದ ಮಕ್ಕಳು ಹಾಗೂ ಹಿರಿಯರನ್ನ ಹೊರತು ಪಡಿಸಿ ಒಂದೆ ಕುಟುಂಬದ 23 ಜನ ರಕ್ತದಾನ ಮಾಡಿದರು ಇವರೊಂದಿಗೆ ಇನ್ನೂ ಅನೇಕ ಜನ ಬಂಧುಗಳು ಹಾಗೂ ಅಭಿಮಾನಿಗಳು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಗೋಕಾಕ ಕ್ಷೇತ್ರದ ಹಿರಿಯ ಮುಖಂಡರಾದ ಅಶೋಕ ಪುಜೇರಿ, ಘಟಪ್ರಭಾ ಪೋಲಿಸ್ ಇನ್ಸಪೆಕ್ಟರ್ ಬಸವರಾಜ ಕಾಮನಬೈಲ, ಜಿಲ್ಲಾ ಪಂಚಾಯಿತ ಮಾಜಿ ಸದಸ್ಯರಾದ ರಾಜು ಕತ್ತಿ, ಕುಮಾ ಚೌಕಶಿ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಈರಪ್ಪ ಸಂಪಗಾರ, ನಿಂಗಣ್ಣ ಮಾಳ್ಯಾಗೊಳ, ನಿಂಗಪ್ಪ ಕಮತಿ, ರೋಟರಿ ರಕ್ಕ ಭಂಡಾರದ ಸೋಮಶೇಖರ ಮಗದುಮ್ಮ, ಬಸವರಾಜ ಹುಳ್ಳೆರ, ಸುರೇಶ ಬಿರಾದಾರ ಪಾಟೀಲ, ಸಹೋದರಾದ ಕಲ್ಲಪ್ಪ ಚೌಕಶಿ, ಕೆಂಪಣ್ಣ ಚೌಕಶಿ ಪುತ್ರರಾದ ನ್ಯಾಯಾವಾದಿ ಮಲ್ಲಿಕಾರ್ಜುನ ಚೌಕಶಿ, ಯಲ್ಲಾಲಿಂಗ ಚೌಕಶಿ, ಶಿವಾನಂದ ಚೌಕಶಿ, ನಾಗರಾಜ ಚೌಕಶಿ, ಯುವ ಮುಖಂಡರಾದ ಪರಪ್ಪ ಗಿರೆಣ್ಣವರ, ಮಲ್ಲು ಸಂಪಗಾರ, ಮಲಿಕ ಅರಭಾವಿ, ಅವ್ವಣ್ಣ ಮದಿಹಳ್ಳಿ, ನೀಲಪ್ಪ ಜಾಗನೂರ, ಬಾಬು ಪಣಿಬಂಧ, ರಾಜು ಧುಮಾಳೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು. ವಿವಿಧ ಇಲಾಖೆ ಹಾಗೂ ಸಹಕಾರಿ ಸಂಘಗಳ ಅಧಿಕಾರಿ ವರ್ಗದವರು ಹಾಗೂ ಚೌಕಶಿ ಕುಟುಂಬ ವರ್ಗದವರು, ಬಡಿಗವಾಡ ಗ್ರಾಮದ ಸಮಸ್ತ ಗುರು ಹಿರಿಯರು ಆಪ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ