ಗೋಕಾಕ : ನಗರದ ಉಪ್ಪಾರ ಓಣಿಯ ಶ್ರೀ ಬಲಭೀಮ ದೇವಸ್ಥಾನದ ಜೀರ್ಣೊದ್ಧಾರ ಮತ್ತು ಶ್ರೀ ಬಲಭೀಮ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವು ದಿ. 20 ರಿಂದ 23ರ ವರೆಗೆ ಅತಿ ವಿಜೃಂಭಣೆಯಿಂದ ಜರುಗಲಿದೆ.
ದಿ. 20 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಉಪ್ಪಾರ ಓಣ ಯ ಹರಿ (ಪಾಂಡುರಂಗ) ದೇವಸ್ಥಾನದಿಂದ ಶ್ರೀ ಬಲಭೀಮ ದೇವರ ಮೂರ್ತಿಯನ್ನು ನೂತನ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ನಂತರ 4 ಗಂಟೆಯಿಂದ ದೇವರ ಮೂರ್ತಿಗೆ ಜಲಾದಿವಾಸ, ಧಾನ್ಯಾಧಿವಾಸ ಪೂಜೆ ಜರುಗಲಿದೆ. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.21 ರಂದು ಪೂಜೆ, ಸಾಯಂಕಾಲ 4 ಗಂಟೆಗೆ ವಾದ್ಯಮೇಳ ಹಾಗೂ ಮುತ್ತೈದೆಯರಿಂದ ನಗರದ ಸುತ್ತಮುತ್ತಲಿನ ದೇವಸ್ಥಾನದ ಪಲ್ಲಕ್ಕಿಗಳನ್ನು ನೂತನ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವುದು. 5 ಗಂಟೆಗೆ ನವಗ್ರಹ ಪೂಜೆ, ವಾಸ್ತು ಹೋಮ ಪೂಜೆ, ರಾತ್ರಿ 8 ಗಂಟೆಗೆ ಶ್ರೀ ನಾಮದೇವ ಶಿಂಪಿ ಸಮಾಜ ಹರಿ ಮಂದಿರ ಟ್ರಸ್ಟ್ ಕಮೀಟಿ ವತಿಯಿಂದ ಮಹಾಪ್ರಸಾದ ಜರುಗಲಿದೆ.
ದಿ.22 ರಂದು ಬೆಳಗಿನ ಜಾವ 4 ಗಂಟೆಗೆ ಬ್ರಾಹ್ಮಿ ಮುಹುರ್ತದಲ್ಲಿ ನವಗ್ರಹ ಪೂಜೆ, ಗಣಪತಿಹೋಮ ನಂತರ ಸಲ್ಲುವ ಶುಭ ಮೂಹುರ್ತದಲ್ಲಿ ಶ್ರೀ ಬಲಭೀಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ನಂತರ 7.16 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ, ನಂತರ 8 ಗಂಟೆಗೆ ದೇವರ ಪಲ್ಲಕ್ಕಿಗಳು ಹಾಗೂ ಮುತ್ತೈದೆಯರಿಂದ ಕುಂಭಮೇಳ, ವಾದ್ಯ ಮೇಳಗಳೊಂದಿಗೆ ಸಂಕೀರ್ತನ ಯಾತ್ರೆಯು ಉಪ್ಪಾರ ಓಣಿಯಿಂದ ಮೆರವಣಿಗೆ ಮುಖಾಂತರ ನಗರದ ಪ್ರಮುಖ ಬೀದಿಗಳ ಮೂಲಕ ಹಾಯ್ದು ದೇವಸ್ಥಾನಕ್ಕೆ ಆಗಮಿಸುವುದು. ನಂತರ 11 ಗಂಟೆಗೆ ಮುಖ್ಯ ಅತಿಥಿಗಳಿಗೆ ಸತ್ಕಾರ ಸಮಾರಂಭ ಹಾಗೂ ಪೂಜ್ಯರಿಂದ ಆಶೀರ್ವಚನ ಸಮಾರಂಭ ಜರುಗಲಿದ್ದು, ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕಟಕೋಳ ಎಮ್ ಚಂದರಗಿಯ ಸಂಸ್ಥಾನ ಹಿರೇಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹೊಸದುರ್ಗ ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಇಲ್ಲಿಯ ಮುಪ್ಪಯ್ಯ ಮಠದ ಶ್ರೀ ರಾಚೋಟೆಶ್ವರ ಶಿವಾಚಾರ್ಯ ಸ್ವಾಮಿಗಳು ತವಗ ಮಠದ ಶ್ರೀಗಳು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸುವರು. ಮುಖ್ಯಅತಿಥಿಗಳಾಗಿ ಮಾಜಿ ಸಚಿವರ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಅರ್ಬನ್ ಬ್ಯಾಂಕಿನ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಉದ್ದಿಮೆದಾರರಾದ ಕಿಶೋರ ಭಟ್ಟ, ಸಂಜು ಚಿಪ್ಪಲಕಟ್ಟಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಂತರ 12.30 ಗಂಟೆಗೆ ಯುವ ಧುರೀಣ ಸದಾಶಿವ ಗುದಗಗೋಳ ಅವರ ನೇತ್ರತ್ವದಲ್ಲಿ ಮಹಾಪ್ರಸಾದ ಜರುಗಲಿದೆ.
ದಿ. 23 ರಂದು ಮುಂಜಾನೆ 7 ಗಂಟೆಗೆ ಮನ್ಯುಸುಕ್ತಹೊಮ, ನಂತರ 8.30 ಗಂಟೆಗೆ ಉಪಾಹಾರ, ಸಾಯಂಕಾಲ 4 ಗಂಟೆಗೆ ಬರಮಾಡಿಕೊಂಡ ಎಲ್ಲ ದೇವರ ಪಲ್ಲಕ್ಕಿಗಳನ್ನು ಬಿಳ್ಕೂಡುವುದು.
ದಿ. 20 ರಿಂದ 23 ರವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯ ವರೆಗೆ ಇಲ್ಲಿಯ ಶ್ರೀ ರಾಜರಾಜೇಶ್ವರ ಸಂಸ್ಥಾನ ಭಾರತೀಯ ಕ್ಷಾತ್ರ ಧರ್ಮಪೀಠದ ಶ್ರೀ ವಿಶ್ವಾದಿರಾಜತೀರ್ಥ ಇವರಿಂದ “ಶ್ರೀ ರಾಮಾಯಣ ಕಥಾ ಪ್ರವಚನ” ಕಾರ್ಯಕ್ರಮ. ಹಾಗೂ ಎಲ್ಲ ವೈದಿಕ ಕಾರ್ಯಕ್ರಮಗಳು ಪುರೋಹಿತ ಅನಂತಸುಬ್ರಮಣ್ಯ ಜೋಶಿ ಅವರ ನೇತ್ರತ್ವದಲ್ಲಿ ಜರುಗಲಿವೆ. ಮಾಹಿತಿಗಾಗಿ ಮೊ. ನಂ 8310010961, 9110680510, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ಶ್ರೀ ಬಲಬೀಮ(ಮಾರುತಿ) ದೇವರ ದೇವಸ್ಥಾನ ಟ್ರಸ್ಟ್ ಕಮೀಟಿಯ ಅಧ್ಯಕ್ಷ ನಿಂಗಪ್ಪ ಹುಳ್ಳಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.