Breaking News

ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ : ಸನತ್ ಜಾರಕಿಹೊಳಿ


ಗೋಕಾಕ : ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಭಕ್ತಾದಿಗಳು ಒಂದಡೆ ಸೇರಿ ದೈವಿ ಶಕ್ತಿಯನ್ನು ಕಂಡು ಕೊಳ್ಳುವ ಈ ಕ್ಷಣ ಅತಿ ಮಹತ್ವದ್ದಾಗಿದೆ ಎಂದು ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು .

ಶುಕ್ರವಾರದಂದು ತಾಲೂಕಿನ ಧುಪದಾಳ – ನವಿಲಮಾನ ಗ್ರಾಮದ ಸೀಮಿ ದ್ಯಾಮವ್ವಾದೇವಿಯ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತರಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗಟ್ಟಿಸುವ ಸಾಮರಸ್ಯದ ಸಂಕೇತವಾಗಿದ್ದು, ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗಗಳಾಗಿವೆ. ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಬರುತ್ತದೆ. ಪ್ರಸ್ತುತ ಸಮಾಜ ಕಲ್ಮಶಗೊಂಡಿದ್ದು, ನಾನಾ ಸಮಸ್ಯೆಗಳಿಂದ ಬಳಲುತ್ತಿದೆ. ಶಾಂತಿ, ನೆಮ್ಮದಿ ಕಂಡುಕೊಳ್ಳಲು ಅಧ್ಯಾತ್ಮಿಕದ ಮೊರೆ ಹೋಗುವುದು ಅಗತ್ಯ. ಸಮಾಜದಲ್ಲಿ ಅನೈತಿಕ, ಅತ್ಯಾಚಾರ, ಅನಾಚಾರ ಹೆಚ್ಚಾಗುತ್ತಿರುವುದಕ್ಕೆ ಜನರು ಧಾರ್ಮಿಕ ನೆಲೆಗಟ್ಟು ಕಳೆದುಕೊಂಡಿರುವುದು ಕಾರಣ.ಸಮಾಜದಲ್ಲಿ ಧಾರ್ಮಿಕತೆಗೆ ಒತ್ತು ನೀಡಬೇಕಾಗಿದೆ. ಅದು ಪರಸ್ಪರರಲ್ಲಿ ಉಂಟಾಗುವ ಅಪನಂಬಿಕೆ, ದ್ವೇಷ, ಅಸೂಯೆಯನ್ನು ತಡೆಯುತ್ತದೆ. ಪ್ರತಿಯೊಬ್ಬರು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಗ್ರಾಮೀಣ ಜನತೆ ದುಶ್ಚಟಗಳಿಗೆ ದಾಸರಾಗುತ್ತಿರುವುದರಿಂದ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ಇದರಿಂದ ಹೊರಬೇಕಾದರೆ ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಬದುಕು ಸಾಗಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಸಂಚಾಲಕ ಸುರೇಶ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುರು ಪೂಜೇರಿ, ಕಾರ್ಯದರ್ಶಿ ಸಾದಿಕ ಹಲ್ಯಾಳ, ಗ್ರಾಮದ ಮುಖಂಡರುಗಳಾದ ಪಪ್ಪು ಹಂದಿಗುಂದ, ಕೆಂಪಣ್ಣ ಹಕ್ಯಾಗೋಳ, ಲಕ್ಷ್ಮಣ ಶಿವನಪ್ಪಗೋಳ, ಲಗಮಣ್ಣ ಪೂಜೇರಿ, ಹನುಮಂತ ವಗ್ಗನ್ನವರ, ಸುನೀಲ್ ಹಮ್ಮನ್ನವರ, ಯಲಪ್ಪ ಸಜಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ