Breaking News

ಯಮಕನಮರಡಿ; ನ. 25, 26ರಂದು ಸತೀಶ್‌ ಪ್ರತಿಭಾ ಪುರಸ್ಕಾರ: ಕಿರಣ ರಜಪೂತ..!


ಯಮಕನಮರಡಿ: ಇಲ್ಲಿನ ಎನ್‌ಎಸ್‌ಎಫ್ ಶಾಲಾ ಆವರಣದಲ್ಲಿ ತಾಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ನಿಯೋಜನೆ ಮಾಡಲಾದ 10ನೇ ಸತೀಶ್‌ ಪ್ರತಿಭಾ ಪುರಸ್ಕಾರವು ನ. 25, 26ರಂದು ಎರಡು ದಿನಗಳ ಕಾಲದ ಮಹಾಸಮರದ ಭವ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್‌ ಮುಖಂಡ ಕಿರಣ ರಜಪೂತ ಹೇಳಿದರು.

ಯಮಕನಮರಡಿಯಲ್ಲಿ ಗುರುವಾರ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿಭೆಗಳಲ್ಲಿ ಹುದಗಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ರಾಜ್ಯಮಟ್ಟದಲ್ಲಿ ಪರಿಸುವ ಕಾರ್ಯವನ್ನು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವರಿ ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಕಳೆದ 10 ವರ್ಷದಿಂದ ಸತೀಶ್‌ ಜಾರಕಿಹೊಳಿ ಪೌಂಡೇಶನ್‌ ಮೂಲಕ ನಡೆಯುತ್ತಿದೆ ಎಂದು ತಿಳಿಸಿದರು.

ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೋವಿಡ್ ಕಾರಣದಿಂದ ಕಳೆದ 3 ವರ್ಷದಿಂದ ನಡೆದಿರಲಿಲ್ಲ. ಹಾಗಾಗಿ ಈ ದಶಮಾನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಇದೇ ನ. 5ರಂದು ಜರುಗಿರುವ ಪ್ರಥಮ ಹಂತ ಆಯ್ಕೆಯಲ್ಲಿ ಸುಮಾರು 15 ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಕೊನೆಯ ಮಹಾಸ್ಪರ್ಧೆಯಲ್ಲಿ 700 ವಿದ್ಯಾರ್ಥಿಗಳ ಭಾವವಹಿಸಲಿದ್ದಾರೆ.

ಈ ಮೂರು ವಿಭಾಗದಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಒಟ್ಟು 10 ಲಕ್ಷ ರೂ.ಗಳ ಬಹುಮಾನ ನೀಡಲಾಗಿದೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ 10 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಮೂರು ಎಲ್‌ಇಡಿ ಬೆಳಗಿನ ವ್ಯವಸ್ಥೆ, ಪಾರ್ಕಿಗ್ ವ್ಯವಸ್ಥೆ ಮಾಡಲಾಗಿದೆ. ದಿ.25ರಂದು ಸಂಜೆ 5ಗಂಟೆಗೆ ನಡೆಯುವ ಪ್ರಥಮ ದಿನದಂದು ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ಯಮಕನಮರಡಿ ಹುಣಸಿಕೊಳ್ಳಮಠದ ಶ್ರೀರಾಚೋಟಿ ಶ್ರೀಗಳು, ಹತ್ತರಗಿಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು, ಉಳ್ಳಾಗಡ್ಡಿ ಖಾನಾಪೂರದ ಶ್ರೀಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ವಹಿಸುವರು. ಯಮಕನಮರಡಿ ಹಾಗೂ ಹತ್ತರಗಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಹುಕ್ಕೇರಿ ಬಿಇಒ ಆಗಮಿಸುವರು. ದಿ.26ರಂದು ಸಂಜೆ 5ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಹುಕ್ಕೇರಿ ಶ್ರೀ ಚಂದ್ರಶೇಖ ಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತ ಮಠದ ಶರಣ ಬಸವ ದೇವರ, ಹತ್ತರಗಿ ಹರಿಮಂದಿರದ ಆನಂದ ಗೋಸಾವಿ ಮಹಾರಾಜರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಸಭೆಯ ಅಧ್ಯಕ್ಷತೆ ವಹಿಸಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಸಮಾರೋಪ ಭಾಷಣ ಮಾಡುವರು. ಕ್ಷೇತ್ರದ ಮಾಜಿ ಜಿಪಂ, ತಾಪಂ ಸದಸ್ಯರು ಹಲವಾರು ಗಣ್ಯರು ಆಗಮಿಸುವರು ಎಂದರು.

ಈ ಸಂದರ್ಭದಲ್ಲಿ ದಡ್ಡಿಯ ಯುವ ಮುಖಂಡ ದಯಾನಂದ ಪಾಟೀಲ, ಶಶಿ ಹಟ್ಟಿ, ಮಹಾದೇವ ಪಟೋಳಿ, ಈರಣ್ಣಾ ಬಿಸಿರೊಟ್ಟಿ, ಆರ್.ಜಿಂಡ್ರಾಳಿ, ದಸ್ತಗೀರ ಬಸಾಪೂರಿ, ಎಸ್.ಎ.ಅತ್ಯಾಳಿ ಮುಂತಾದವರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ