ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು ಕಳ್ಳತನ ಗಳ ಹೆಚ್ಚಾಗಿದ್ದವು.
ದಿನಾಂಕ: 14-09-2022 ರಂದು ಗುರುನಾಥ ವೀರುಪಾಕ್ಷ ಬಡಿಗೇರ ಇವರು ಗೋಕಾಕ ಯದಿಂದ ಕನಸಗೇರಿಗೆ ಹೋಗುವಾಗ ಯಾರೋ ಡಕಾಯಿತರು ತನ್ನ ಮೋಟಾರ ಸೈಕಲನ್ನು ಅಡ್ಡಗಟ್ಟಿ ಬಂಗಾರದ ಚೈನ್ ಮತ್ತು ಉಂಗಾರವನ್ನು ಸುಲಿಗೆ ಡಕಾಯಿತಿ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ನೀಡಿದರು ಈ ದೂರಿನ ಆಧಾರದ ಮೇಲೆ ಗಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಸದರಿ ಪ್ಕಂರಕರಣಗಳನ್ನು ಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಅವರು ಪ್ರಕರಣಗಳ ಪತ್ತೆಗಾಗಿ ಗೋಪಾಲ.ಆರ್.ರಾಠೋಡ ಸಿ.ಪಿ.ಐ ಗೋಕಾಕ ವೃತ್ತ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಬೆಳಗಾವಿ ಹೆಚ್ಚುವರಿ ಎಸ್.ಪಿ. ಎಂ.ವೇಣುಗೋಪಾಲ ಹಾಗೂ ಗೋಕಾಕ ಡಿವಾಯ್ಎಸ್ಪಿ ಡಿ.ಎಚ್.ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣಗಳಲ್ಲಿ ತನಿಖೆ ಕೈಕೊಂಡರು .
ದಿನಾಂಕ: 18-09-2023 ರಂದು *’ಬೆನಚಿನಮರಡಿ ಖಿಲಾರಿ ಗ್ಯಾಂಗ್ ಹಾಗೂ ಗೋಕಾಕದ ಎಸ್.ಪಿ ಸರ್ಕಾರ ಗ್ಯಾಂಗ್* ಗಳ 09 ಜನ ಡಕಾಯಿತರನ್ನು ಬಂಧಿಸಿ ಸುಲಿಗೆ, ದರೋಡೆ, ಮೋಟಾರ ಸೈಕಲ ಕಳ್ಳತನ, ಜಾನುವಾರು ಕಳ್ಳತನ ಮಾಡಿದ್ದ ಸುಮಾರು 7,89,700/- ಮೌಲ್ಯದ ಚಿನ್ನಾಭರಣ, ನಗದು ಹಣ, 19 ಮೊಬೈಲಗಳು, ಮತ್ತು 16 ಮೋಟಾರ ಸೈಕಲಗಳು, ಹಾಗೂ ಒಂದು ಅಶೋಕ ಲೈಲ್ಯಾಂಡ್, ವಾಹನ ಹಾಗೂ 04 ಜಂಬೆ-ತಲವಾರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಸುಮಾರು 03 ಸುಲಿಗೆ-ಡಕಾಯಿತಿ, 12 ಜಾನುವಾರು ಕಳ್ಳತನ, ಹಾಗೂ ಮೋಟಾರ ಸೈಕಲ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಡಕಾಯಿತಿ ಗ್ಯಾಂಗಿನವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಈ ಪ್ರಕರಣ ಭೇದಿಸಲು ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೋಹಿತ ಹಾಗೂ ನಗರ ಪಿಎಸ್ಐ ಎಮ್.ಡಿ.ಘೋರಿ ಹಾಗೂ ಅಂಕಲಗಿ ಪಿಎಸ್ಐ ಎಚ್. ಯರಝರ್ವಿ ಮತ್ತು ಸಿಬ್ಬಂದಿಗಳಾದ ಬಿ.ವಿ.ನೇರ್ಲಿ, ವಿ ಆರ್ ನಾಯಕ , ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಸ್.ಎಚ್.ಈರಗಾರ, ಎಂ ಬಿ ಗಿಡ್ಡಗೀರಿ, ಎಮ್.ಎಮ್.ಹಾಲೋಳ್ಳಿ, ಜಿ.ಎಚ್.ಗುಡ್ಲ , ಎಮ್.ಬಿ.ತಳವಾರ, ಕೆ ಆಯ್ ತಿಳಿಗಂಜಿ, ಸಂತೋಷ ರುದ್ರಮಟ್ಟಿ ಅವರು ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದಾರೆ.
ಬೆಳಗಾವಿ ಎಸ್ಪಿ ರವರು ಬೆಲೆ ಬಾಳುವ ಚಿನ್ನಾಭರಣಗಳನ್ನು ಬ್ಯಾಂಕ ಲಾಕರಗಳಲ್ಲಿ ಇಡುವಂತೆ ಹಾಗೂ ಮೈಮೇಲೆ ಆಭರಣಗಳನ್ನು ಹಾಕಿಕೊಂಡು ಮನೆಯಿಂದ ಹೊರಗಡೆ ಹೋಗುವಾಗ `ಡಕಾಯಿತಿ-ಸುಲಿಗೆಗಾರರಿಂದ ಎಚ್ಚರಿಕೆಯಿಂದ ಇರಲು, ಹಾಗೂ ಲಾಕಡ ಹೌಸಗಳ ಬಗ್ಗೆ ಸರಹದ್ದಿನ ಪೊಲೀಸ ಠಾಣೆಗಳಿಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಕೋರಿರುತ್ತಾರೆ.