ಗೋಕಾಕ: ಜಾರಕಿಹೊಳಿಯವರ ಹಿರಿಯ ಸಹೋದರಿ, ಗೋಕಾಕ ನಗರಸಭೆ ಮಾಜಿ ಅಧ್ಯಕ್ಷೆ ಲಗಮವ್ವಾ ನಿಂಗಪ್ಪಾ ಸುಲಧಾಳ (67) ಹೃದಯಾಘಾತದಿಂದ ಇಂದು ಬೆಳಗ್ಗೆ 8:00 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ, ಇಬ್ಬರು ಪುತ್ರರು, ಓರ್ವ ಸುಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ಲಗಮವ್ವಾ ನಿಂಗಪ್ಪಾ ಸುಲಧಾಳ ಅವರು ಗೋಕಾಕ ನಗರಸಭೆ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೃತರ ಅಂತ್ಯಕ್ರಿಯೆ ನಗರದ ಕುಂಬಾರ ಗಲ್ಲಿಯ ರುಧ್ರಭೂಮಿಯಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮಾತೃಹೃದಯದ ಸಹೋದರಿ ಲಗಮವ್ವಾಯವರು ಸರಳತೆ ಹಾಗೂ ಸೌಜನ್ಯತೆಯ ಆಗರವಾಗಿದ್ದರು. ಬಾಲ್ಯದಿಂದಲೂ ನಮಗೆಲ್ಲ ಪ್ರೇರೇಪಿಸಿ ಪ್ರೋತ್ಸಾಹಿಸಿ ಬೆಳೆಸಿದ್ದರು. ಅವರ ಮಾರ್ಗದರ್ಶನವು ನನ್ನ ಬೆಳವಣಗೆಯಲ್ಲಿ ಪ್ರಧಾನ ಪಾತ್ರವಹಿಸಿತ್ತು. ನನ್ನ ತಾಯಿ ಸ್ವರೂಪಳಾಗಿದ್ದ ಸಹೋದರಿಯನ್ನು ಕಳೆದುಕೊಂಡು ತೀವ್ರ ಆಘಾತವನ್ನುಂಟುಮಾಡಿದೆ. ಭಗವಂತನು ಅವರ ಪವಿತ್ರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ದುಃಖ ವ್ಯಕ್ತಪಡಿಸಿದ್ದಾರೆ.