ಘಟಪ್ರಭಾ; ನಗರದ ಮುಸ್ಲಿಂ ಜಮಾತಗಳು ಬುಧವಾರ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರ ಉಸ್ಥಿತಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಗೋಕಾಕ್ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.

ನ್ಥಳೀಯ ಜಾಮಿಯಾ ಮಸ್ಜಿದ್, ಮೂಹ್ಮದಿಯಾ ಮಸ್ಜಿದ್, ಮದೀನಾ ಮಸ್ಜಿದ್, ನೂರಾನಿ ಮಸ್ಜಿದ್, ಬಿಲಾಲ ಮಸ್ಜಿದ್, ಬಾಗವಾನ ಜಮಾತ, ಕುರೇಶ ಜಮಾತ, ಇರಾನಿ ಜಮಾತ ಸೇರಿದಂತೆ 8ಕ್ಕೂ ಹೆಚ್ಚು ಜಮಾತಗಳ ಅಧ್ಯಕ್ಷರು ಹಾಗೂ ಮುಖಂಡರು ಶಾಸಕ ರಮೇಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕ್ಷೇತ್ರದ ವಿವಿಧ ಸಮಾಜಗಳಿಗೆ ನೀಡುತ್ತಿರುವ ಸಾಮಾಜಿಕ ನ್ಯಾಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಬೆಂಬಲಿಸುವ ಬರವಸೆ ನೀಡಿದರು.

ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸುಧೀರ್ಘ ಕಾಲ ಸಮಾಲೋಚನೆ ನಡೆಸಿದ ಅಂಬಿರಾವ ಪಾಟೀಲ ಅವರು ಎಲ್ಲರ ಸಮಸ್ಯೆಗಳನ್ನು ಶಾಂತ ಚಿತ್ತದಿಂದ ಆಲಿಸಿ ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಿ. ಎಂ. ದಳವಾಯಿ, ರಾಮಣ್ಣ ಹುಕ್ಕೇರಿ, ಮುಸ್ಲಿಂ ಸಮಾಜದ ಮುಖಂಡರಾದ ಹೈದರಅಲಿ ಮನಿಯಾರ, ನೂರ ಪೀರಜಾದೆ, ಅಹ್ಮದ್ ಹುಸೇನ್ ಬಾಗವಾನ, ಯುನೂಸ ಶೇಖ್, ಮುಷ್ತಾಕ್ ಖಾಜಿ, ಮೊಹ್ಮದ ಮೋಮಿನ,ಮುನ್ನಾ ಸೌದಾಗರ, ಅಸೀಫ ಖೋಜಾ, ರಜಾಕ ಚೌಧರಿ, ಸಲೀಮ ಕಬ್ಬೂರ, ಇಮ್ರಾನ್ ಬಟಕುಕಿ೯, ದಿಲಾವರ ನದಾಫ, ದಾದು ಬೇಪಾರಿ, ಸೇರಿದಂತೆ, ನೂರಾರು ಮುಸ್ಲಿಂ ಜಮಾತ ಬಾಂಧವರು ಸಭೆಯಲ್ಲಿ ಪಾಲ್ಗೂಂಡಿದರು
CKNEWSKANNADA / BRASTACHARDARSHAN CK NEWS KANNADA