ಚಿಕ್ಕೋಡಿ :ಮುಂಬರುವ 2023 ರ ಸಾರ್ವತ್ರಿಕ ವಿಧಾನಸಭಾ ಚಿಕ್ಕೋಡಿ- ಸದಲಗಾ ಮತಕ್ಷೇತ್ರದ BBP (ಬಹುಜನ ಭಾರತ ಪಾರ್ಟಿ ) ವತಿಯಿಂದ ಶ್ರೀ ಈಶ್ವರ ಗುಡಜ ಇವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಬುಧವಾರ ಪಟ್ಟಣದ ತಾಲೂಕಾಡಳಿತ ವಿಧಾನ ಸೌಧ(ತಹಶೀಲ್ದಾರ ಕಾರ್ಯಾಲಯ)ಕ್ಕೆ ತೆರಳಿ ಚಿಕ್ಕೋಡಿ ಮತಕ್ಷೇತ್ರದ ಚುನಾವಣಾಧಿಕಾರಿ ಮಾಧವ್ ಗಿತ್ತೆ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. BBP (ಬಹುಜನ ಭಾರತ ಪಾರ್ಟಿ ) ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿ ಈಶ್ವರ ಗುಡಜ ಇವರು ಚಿಕ್ಕೋಡಿ ಮತ್ತು ಸದಲಗಾ ಮತಕ್ಷೇತ್ರದಲಿ ಹಲವಾರು ಅಭಿವೃದ್ಧಿ ಕನಸುಗಳನ್ನು ಇಟ್ಟಿಕೊಂಡಿದ್ದೇನೆ ನನಗೆ ರಾಜಕೀಯ ಬೇಡ ವಾಗಿತ್ತು ಆದರೇ ಕಾರ್ಯಕರ್ತರ ಸಲುವಾಗಿ ನಾನು ರಾಜಕೀಯಕ್ಕೆ ಬಂದಿದ್ದೆನೆ ಜನರ ಕಷ್ಟಕ್ಕೆ ನಾನು ಅವರ ಜೊತೆಗೆ ಇರ್ತೀನಿ ಹಾಗು ಸರ್ಕಾರದಿಂದ ಬರುವ ಸೌಲಭ್ಯಗಳು ನೇರವಾಗಿ ಜನಗಳಿಗೆ ಸಿಗುವ ಹಾಗೆ ಮಾಡುವುದು ಹಾಗು ಯುವಕರಿಗೆ ಉದ್ಯೋಗ ನೀಡುವುದೆ ನಮ್ಮ ಉದ್ದೇಶ ವಾಗಿದೆ ನಾನು ಶಾಸಕನ ಆದರೇ ಇಡಿ ಕ್ಷೇತ್ರದ ಜನರು ಶಾಸಕ ಆದ ಹಾಗೆ ಅಂದ್ರು ಹಾಗು ನನ್ನೋಂದಿಗೆ ಕ್ಷೇತ್ರಲ್ಲಿ ಮಾಯಪ್ಪ ಗಾಂಜಯಗೋಳ.ರಾಮ ರಾಯನ್ನವರ ವಿನೋದ ಗಸ್ತಿ.ರಾಕೇಶ ಶಿಂಗೆ.ಯುವರಾಜ ಕಾಂಬಳೆ. ಕೃಷ್ಣ ಕೆಂಚನವರ್. ಎಲ್ಲ ಕಾರ್ಯಕರ್ತರು ನನ್ನ ಗೆಲುವಿಗೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಾನು ಚಿರರುನಿ ಅಗುತ್ತೇನೆ ಅಂತ ಹೇಳಿದರು.
ಪಕ್ಷದ ಮುಖಂಡ ರವಿ ಹಕ್ಯಗೋಳ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಅಜ್ಜನಾದ ದತ್ತು ಹಕ್ಯಾಗೋಳ ಅವರು 2004ರಲ್ಲಿ ಚಿಕ್ಕೋಡಿ ಮತ್ತು ಸದಲಗಾ ಮತಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದರು ಅವಾಗಿಂದ ನಮ್ಮ ಅವರು ಯಾರು ಸ್ಪರ್ದೇ ಮಾಡಿರಿಲಿಲ್ಲ ಆದ್ದರಿಂದ ನಾವು ನಮ್ಮ ಸಹೋದರನಾದ ಈಶ್ವರ ಗುಡಜ ಅವರನ್ನು ಕ್ಷೇತ್ರದ ಜನರ ಜೊತೆಗೆ ಚರ್ಚೆ ಮಾಡಿ ನಾವು ಅವರನ್ನ ಅಭ್ಯರ್ಥಿ ಮಾಡಿ ಬೂತ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಅವರನ್ನು ಆಶೀರ್ವಾದ ಮಾಡುತ್ತೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ರವಿ ಹಕ್ಯಗೋಳ.ರಾಮಾ ರಾಯನ್ನವರ.ವೈಶಾಲಿ ಭೂಸಲೆ.ವಿನೋದ ಗಸ್ತಿ ಸೇರಿದಂತೆ ಅಭಿಮಾನಿಗಳು ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡೋಣ ಅಂತ ಹೇಳಿದರು.