Breaking News

*ತಂದೆಯ ಪರವಾಗಿ ಯಮಕನಮರಡಿ ಕಣಕ್ಕೆ ಕಾಲಿಟ್ಟ ಯುವ ನಾಯಕ!*


ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಹೆಸರುವಾಸಿಯಾಗಿರುವ ಪ್ರಭಾವಿ, ಜನಪ್ರಿಯ ನಾಯಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್‌ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪಯಣ ಬೆಳೆಸಿದರೆ, ಇತ್ತ ಸುಪುತ್ರ ರಾಹುಲ್‌ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲಗೊಳಿಸಲು ತಲ್ಲಣರಾಗಿದ್ದಾರೆ.

ಹೌದು….ಇದು ಯಮಕನಮರ್ಡಿ ಕ್ಷೇತ್ರದ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕ್ಷೇತ್ರದ ಪ್ರಸ್ತುತ ಕಹಾನಿ, ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದು ಯಮಕನಮರಡಿ ಕ್ಷೇತ್ರದಲ್ಲಿ ಈ ಬಾರಿ ತಂದೆ ಸತೀಶ್ ಜಾರಕಿಹೊಳಿ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಕೈಮುಗಿದುತಂದೆಯ ಪರವಾಗಿ ಮತಯಾಚಿಸುವ ಮೂಲಕ ಮತದಾರರ ಗಮನಸೆಳೆಯುತ್ತಿದ್ದಾರೆ.

ಕ್ಷೇತ್ರದ ಜನರ ಜೊತೆ ನಿರಂತರವಾಗಿ ಸಂಪರ್ಕ : ಕಳೆದ ಬಾರಿ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಅಷ್ಟೊಂದು ಸಿರೀಯಸ್ ಆಗಿ ಸುತ್ತಾಡದ ಕಾರಣ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.ಅವತ್ತಿನ ದಿನವೇ ಜಾಗೃತರಾಗಿದ್ದ ಶಾಸಕ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ದಿಯ ಹೊಳೆ ಹರಿಸಿದ್ದಾರೆ. ನಿರಂತರವಾಗಿ ಕ್ಷೇತ್ರದಲ್ಲಿ ಸುತ್ತಾಡಿ ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸಿದ್ದಾರೆ.ರಾಜಕೀಯ ವಿರೋಧಿಗಳ ಸಮಸ್ಯೆಗಳಿಗೂ ಸ್ಪಂದಿಸಿ ಅವರ ಮನಗೆದ್ದಿದ್ದಾರೆ, ಜೊತೆಗೆ ಪುತ್ರ ರಾಹುಲ್ ಜಾರಕಿಹೊಳಿ ಕ್ಷೇತ್ರದ ಜನರ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದು ತಂದೆಯ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿ ನಿಭಾಯಿಸುತ್ತಿದ್ದು ಸುಪುತ್ರನ ಶ್ರಮ ಯಮಕನಮರಡಿ ಕ್ಷೇತ್ರದಲ್ಲಿ ಎಲ್ಲವೂ ಸುಸೂತ್ರವಾಗಿದೆ ಎನ್ನುವ ಸಂಕೇತ ಈಗ ಕ್ಷೇತ್ರದಲ್ಲಿ ಕಾಣುತ್ತಿದೆ.

ಯುವ ಕಣ್ಮಣಿ ರಾಹುಲ್: ಸಂಕಷ್ಟಕ್ಕೆ ಸ್ಪಂದಿಸುವಂತ ಸಹೃದಯಿ, ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸಿಕೊಟ್ಟು ಸರ್ವರಿಗೂ ಚಿರಪರಿಚಿತವಾದ ಯುವಕ ಕಣ್ಮಣಿಯೇ ರಾಹುಲ್ ಸತೀಶ ಜಾರಕಿಹೊಳಿ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ, ಯಮಕನಮರಡಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರ ಸುಪುತ್ರರಾದ ರಾಹುಲ್ ಅವರು ರಾಜಕೀಯ ಪ್ರತಿಷ್ಠಿತ ಕುಟುಂಬದಿಂದ ಬಂದರೂ ಸಾಮಾಜಿಕ ಸೇವೆಯಿಂದಲೇ ಜಿಲ್ಲೆಯಲ್ಲಿ ಜನರ ಮನದಲ್ಲಿ ಯುವರಾಜನಾಗಿ ಮಿಂಚುತ್ತಿದ್ದಾರೆ.

ತಂದೆ ಮಾರ್ಗದಲ್ಲಿಯೇ ರಾಹುಲ್ ನಡಿಗೆ:ಬೆಳಗಾವಿ ಸೇರಿದಂತೆ ರಾಜ್ಯದಲ್ಲಿಯೇ ಸತೀಶ ಜಾರಕಿಹೊಳಿ ಅವರು ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದು, ಸಮಾಜ ಸೇವೆ ಮೂಲಕ ದೀನ ದಲಿತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ನೊಂದ ಜೀವಗಳಿಗೆ ಭರವಸೆ ಹೊಂಬೆಳಕಾಗಿದ್ದಾರೆ. ೯೦ರ ದಶಕದಲ್ಲಿ ತಂದೆ ಸತೀಶ ಜಾರಕಿಹೊಳಿ ಅವರು ಸಮಾಜ ಸೇವೆಗೆ ಬಂದಿದ್ದು, ಶೋಷಿತರ ಪರ ದನಿಯಾಗಿದ್ದರು. ಸಾಮಾಜಿಕ ತಳಹದಿ ತತ್ವದಡಿ ಅಧಿಕಾರ ವೀಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು.

 

ಈ ಮೂಲಕ ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರನ್ನೂ ಒಂದೇ ವೇದಿಕೆಗೆ ಕರೆದುಕೊಂಡು ಹೋಗುವುದು ಇತಿಹಾಸ. ಪ್ರತಿ ಜಿಲ್ಲೆಯಲ್ಲಿಯೂ ಸತೀಶ ಅಭಿಮಾನ ಬಳಗವು ಸತೀಶ ಸೂಚಿಸಿದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಈಗ ಸತೀಶ ಅವರ ಪುತ್ರ ರಾಹುಲ್ ಕೂಡ ತಂದೆಯಂತೆ ಬಡವರ ಕಷ್ಟಗಳಿಗೆ ಸ್ಪಂದಿಸುತ್ತ ಸಮಾಜಮುಖಿ ಕಾರ್ಯಗಳಿಗೆ ಮುಂಚೂಣಿಯಾಗಿ ನಿಂತಿರುವುದು ಹಾಗೂ ಯಮಕನಮರಡಿ ಕ್ಷೇತ್ರದಲ್ಲಿ ತಂದೆ ಪರ ಮತಯಾಚನೆ ಮಾಡುತ್ತಿರುವುದು ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಆನೆಬಲ ಬಂದಂತಾಗಿದೆ.

 

 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ