Breaking News

ಬೇರು ಮಟ್ಟದಿಂದ ಪಕ್ಷ ಸಂಘಟಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ


ಗೋಕಾಕ ವಿಧಾನಸಭಾ ಮತಕ್ಷೇತ್ರದ ಘಟಪ್ರಭಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ

 

ಗೋಕಾಕ: ‘ಬೇರುಮಟ್ಟದಿಂದ ಕೈ ಪಕ್ಷವನ್ನು ಬಲಪಡಿಸಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಲು ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದ ಗೋಕಾಕ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಮುಖಂಡರ ಕೊಡುಗೆ ಅಪಾರ, ಸಾಮಾಜಿಕ ನ್ಯಾಯ ಕೊಡುವವಲ್ಲಿ ಕಾಂಗ್ರೆಸ್‌ ಪಕ್ಷ ದ ಪಾತ್ರ ಮುಖ್ಯ ಎಂದ ಅವರು, ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ. ಅಚ್ಚೇದಿನ್‌ ಬರುತ್ತೆ ಎಂದು ಹೇಳಿರುವ ಬಿಜೆಪಿಯವರು ಕಳೆದ ೯ ವರ್ಷ ಗತಿಸಿದರೂ ಯಾವ ಅಚ್ಚೇದ್ದಿನ್‌ ಬರಲಿಲ್ಲ ಎಂದು ವ್ಯಂಗ್ಯವಾಡಿದರು.

‘ಕಳೆದ ನಾಲ್ಕು ವರ್ಷದಿಂದ ರಾಜ್ಯದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಹಿನ್ನಡೆ ಆಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸೇರಿ ಜಾತಿ ಭೇದವಿಲ್ಲದೆ ಸಮಾಜ ಒಗ್ಗೂಡಿಸಿ ಪಕ್ಷ ಸಂಘಟಿಸಲು ಕಾರ್ಯಕರ್ತರು ಸಿದ್ದರಾಗಬೇಕು ಎಂದು ಹೇಳಿದರು.

ರಾಜಕೀಯದಲ್ಲಿ ಹೋರಾಟ ಮಾಡುವವರ ಸಂಖ್ಯೆ ಬಹಳ ಕಡಿಮೆ. ಅಶೋಕ ಪೂಜಾರಿ ಹೋರಾಟ ಮಾಡುತ್ತ ರಾಜಕಾರಣ ಮಾಡುತ್ತಿದ್ದಾರೆ. ಗೋಕಾಕ್​ ಕ್ಷೇತ್ರದಿಂದ ಸ್ಪರ್ಧಿಸಿ 4 ಬಾರಿ ಸೋತರೂ ಛಲ ಬಿಟ್ಟಿಲ್ಲ. ಅದ್ದರಿಂದ ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಖಂಡ ಅಶೋಕ ಪೂಜೇರ ಅವರಿಗೆ ಶಕ್ತಿ ತುಂಬಲು ಕೈ ಕಾರ್ಯಕರ್ತರು ಇಂದಿನಿಂದ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮುಂದಿನ‌‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಗೆಲ್ಲಲಿದ್ದೇವೆ. ಕಾಂಗ್ರೆಸ್‌ ಕಾರ್ಯಕರ್ತರು ಅಭಿವೃದ್ಧಿ ಹಾಗೂ ಪಕ್ಷ ದ ತತ್ವ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಬೂತ ಮಟ್ಟದಿಂದ ಪಕ್ಷ ಸಂಗಟಿಸಲು ಕಾರ್ಯಕರ್ತರು ಸಿದ್ದರಾಗಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಈ ವೇಳೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಘಟಕದ ಜಿಲ್ಲಾ ಅಧ್ಯಕ್ಷೆ ಕಲ್ಪನಾ ಜೋಷಿ, ಗ್ರಾಮೀಣ ಅಧ್ಯಕ್ಷ ಪ್ರಕಾಶ ಡಾಂಗೆ, ನಗರ ಅಧ್ಯಕ್ಷ ಜಾಕೀರ್‌ ನದಾಫ್‌, ಹಿರಿಯ ಕಾಂಗ್ರೆಸ್‌ ಮುಖಂಡ ಸಿದ್ದಲಿಂಗ ದಳವಾಯಿ, ಕೆಪಿಸಿಸಿ ಸದಸ್ಯೆ ಪ್ರೇಮಾ ಚಿಕ್ಕೋಡಿ, ಕಾಂಗ್ರೆಸ್‌ ಮುಖಂಡ ಶಂಕರ ಗಿಡನವರ, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿಇಮ್ರಾನ ತಪಕಿರ, ಅಲ್ಪ ಸಂಖ್ಯಾತ ಗ್ರಾಮೀಣ ಅಧ್ಯಕ್ಷ ರೆಹಮಾನ್‌ ಮೋಕಾಶಿ, ಪ್ರಕಾಶ ಕೋಲಾರ್‌ ಶಂಕರ ಹುರಕಡ್ಲಿ, ಯಲ್ಲಪ್ಪ ನಂದಿ, ರಾಹುಲ್‌ ಬಡೆಸಗೋಳ, ಬಸವರಾಜ ಹೊಳೆಯಾಚೆ, ಹನುಮಂತ ಗೋಪಾಳಿ,ಯಲ್ಲಪ್ಪ ನಂದಿ, ಎಂ.ಕೆ. ಪೂಜೇರ, ನಜೇರ್‌ ಶೇಖ್‌ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ