Breaking News

ಗೋಕಾಕದಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನ ಬಂಧನ!


ಗೋಕಾಕ : ನಗರದ ಕಳೆದ ಕೆಲವು ತಿಂಗಳಿಂದ ಸಾಕಷ್ಟು ಮನೆ ಕಳ್ಳತನವಾಗುತ್ತಿದ್ದು, ಈ ಬಗ್ಗೆ ತನಿಖೆ ಆರಂಭ ಮಾಡಿದ ಪೋಲಿಸ್ ಇಲಾಖೆ ಓರ್ವ ಕಳ್ಳನನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಮುಂಜಾನೆ ಯೋಗಿಕೊಳ್ಳ ರಸ್ತೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಓರ್ವನನ್ನು ಅಪರಾದ ವಿಭಾಗದ ಸಿಬ್ಬಂದಿಗಳು ಹಿಡಿದುಕೊಂಡು ಬಂದು ಪಿಎಸ್ಐ ಅವರು ವಿಚಾರಿಸಿದಾಗ ಎರಡರಿಂದ ಮೂರು ತಿಂಗಳ ಹಿಂದೆ ಪಿಡಬ್ಲೂಡಿ ಕ್ವಾಟರ್ಸದಲ್ಲಿರುವ ಒಂದು ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ..

ಆರೋಪಿತನಿಂದ 14.5 ಗ್ರಾಂ ಬಂಗಾರದ ಆಭರಣಗಳು ಅಕಿ: 75000/- ಮತ್ತು 250 ಗ್ರಾಂ ಬೆಳ್ಳಿಯ ಆಭರಣಗಳು ಅಕಿ: 12500/- ಹಾಗೂ ಒಂದು ಸ್ಯಾಮಸಂಗ ಮತ್ತು ಒಂದು ಎಮ್‌ಐ ಕಂಪನಿಯ ಮೋಬೈಲಗಳು ಅ.8: 15000/- ಹೀಗೆ ಒಟ್ಟು 10,2500/- ರೂ ಮೌಲ್ಯದ ಬಂಗಾರದ ಮತ್ತು ಬಳ್ಳಿಯ ಆಭರಣಗಳು ಹಾಗೂ ಎರಡು ಮೋಬೈಲಗಳನ್ನು ವಶಪಡಿಸಿಕೊಂಡಿದ್ದಾರೆ, ಸದರಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ತನಿಖೆಯಲ್ಲಿ ಡಿವಾಯ್ಎಸ್ಪಿ ಡಿ.ಎಚ್, ಮುಲ್ಲಾ, ಸಿ.ಪಿ.ಐ ಪ್ರಕಾಶ ಯಾತನೂರ ನೇತೃತ್ವದಲ್ಲಿ ಪಿ.ಎಸ್.ಐ ಎಮ್ ಡಿ ಘೋರಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಿ.ವಿ ನೇರಲೆ.ಸುರೇಶ ಈರಗಾರ, ಮಲ್ಲಪ್ಪ ಗಿಡಗಿರಿ, ರಮೇಶ ಮುರನಾಳೆ, ವಿಠ್ಠಲ ನಾಯಕ, ಸಿ ಎಸ್ ಬಿರಾದಾರ, ಎನ ಬಿ ಬೆಳಗಲೆ, ಎಸ್ ಬಿ ಪೂಜೇರಿ ಇದ್ದರು.

 

ಇನ್ನೂ ಇದೆ ರೀತಿ ಗೋಕಾಕ ನಗರದಲ್ಲಿ ಸಾಕಷ್ಟು ಕಳ್ಳತನವಾಗಿದ್ದು ಆದಷ್ಟು ಬೇಗ ಆ ಕಳ್ಳತನಗಳ ಗ್ಯಾಂಗ್ ಹೆಡೆಮುರಿ ಕಟ್ಟಿ, ಜನತೆಯ ಚರಾಸ್ತಿಗಳನ್ನು ಮರಳಿ ಒದಗಿಸುವಂತೆ ಗೋಕಾಕ ಜನತೆಯ ಆಗ್ರಹವಾಗಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ