Breaking News

ದಲಿತ ಸಾಹಿತ್ಯ, ಚಿಂತನೆಗಳನ್ನು ಸಮಾಜದ ಜನತೆಗೆ ತಲುಪಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ


4ನೇ ರಾಜ್ಯ ಮಟ್ಟದ ದಲಿತ ಲೇಖಕರ-ಚಿಂತಕರ ಸಮಾವೇಶ

ಬೆಳಗಾವಿ: ದಲಿತ ಸಾಹಿತ್ಯ, ಚಿಂತಕರು ಇರುವಷ್ಟು ಬೇರೆಯವರು ಇಲ್ಲ. ಆದರೆ ದಲಿತ ಸಾಹಿತ್ಯ, ಚಿಂತನೆಗಳು ಸಮಾಜದ ಜನತೆಗೆ ಮುಟ್ಟುತ್ತಿಲ್ಲ. ಹೀಗಾಗಿ ದಲಿತ ಸಾಹಿತ್ಯ, ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

 

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯ ಘಟಕ ಹಮ್ಮಿಕೊಂಡಿದ್ದ 4ನೇ ರಾಜ್ಯ ಮಟ್ಟದ ದಲಿತ ಲೇಖಕರ ಹಾಗೂ ಚಿಂತಕರ ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿಜ್ಞಾನ ಎಷ್ಟೇ ಉತ್ತುಂಗಕ್ಕೇರಿದ್ದರೂ ಮೌಢ್ಯ ಆಚರಣೆ, ಜಾತಿ ಪದ್ಧತಿಯ ಬೇರುಗಳು ಇನ್ನಷ್ಟು ಬಲಿಷ್ಠವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಬುದ್ಧ-ಬಸವ-ಅಂಬೇಡ್ಕರರ ತತ್ವಗಳು ಸಾಮಾಜಿಕ ಸಮಸ್ಯೆಗಳಿಗೆ ದಿವ್ಯ ಔಷಧವಾಗಿವೆ ಎಂದರು.

ದಯವಿಲ್ಲದ ಧರ್ಮವಾವುದಯ್ಯಾ, ದಯವೇ ಧರ್ಮದ ಮೂಲವಯ್ಯಾ ಎಂದು ಬಸವಣ್ಣನವರು ಹೇಳಿದ್ದಾರೆ, ಆದರೆ ಇಂದು ಕೆಲವರು ಧರ್ಮದ ಹೆಸರಿನಲ್ಲಿ ದ್ವೇಷ ಹರಡುವ ಕೆಲಸವನ್ನು ಮಾಡುತ್ತಿದ್ದು, ಇಂತಹ ಬೆಳವಣಿಗೆಗಳನ್ನು ತಡೆಗಟ್ಟಬೇಕೆಂದು ತಿಳಿಸಿದರು.

ಬಸವೇಶ್ವರರ ಉದಾತ್ತ ಧ್ಯೇಯಗಳನ್ನು ಅಳವಡಿಸಿಕೊಂಡಿದ್ದರೆ ಕರ್ನಾಟಕ ಜಾತ್ಯತೀತ ರಾಜ್ಯವಾಗುತ್ತಿತ್ತು. ಬಸವಣ್ಣನ ತತ್ವಗಳನ್ನು ಅನುಸರಿಸದೇ ಅವರನ್ನು ಪೂಜಿಸುತ್ತಿರುವುದು ವಿಪರ್ಯಾಸವಾಗಿದೆ. ಡಾ.ಬಿ.ಆರ್.‌ ಅಂಬೇಡ್ಕರರ ಚಿಂತನೆಗಳನ್ನು ನೇಪಥ್ಯಕ್ಕೆ ಸರಿಸುತ್ತಿದ್ದೇವೆ. ಕೇವಲ ದಲಿತರ ಉದ್ಧಾರಕ್ಕೆ ಅಂಬೇಡ್ಕರ್‌ ಶ್ರಮಿಸಲಿಲ್ಲ. ಬದಲಿಗೆ ಭಾರತೀಯರ ಅಸ್ಮಿತೆಗೆ ಹೋರಾಡಿದರು. ಎಲ್ಲಾ ವರ್ಗದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದು ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಂತರದ ಹೋರಾಟದ ಶಕ್ತಿ ಕುಗ್ಗಿದೆ. ಪ್ರಸ್ತುತ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ವಿದ್ಯಾವಂತರು ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌, ಶಾಹು ಮಹಾರಾಜರು, ಸಾವಿತ್ರಿಬಾಯಿ ಫುಲೆ ಅವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುಬೇಕೆಂದು ಕರೆ ನೀಡಿದರು

ಈಚೆಗೆ ದಲಿತ ಸಮಾಜಕ್ಕೆ ಸೇರಿದ ಮದು ಮಗ ಕುದುರೆ ಮೇಲೆ ಕುಳಿತು ಮೆರವಣಿಗೆ ಮಾಡಿಕೊಂಡರೆ ಮರು ದಿನ ಬೆಳಗ್ಗೆ ಅವನ ಮೇಲೆ ಹಲ್ಲೆ ಮಾಡಿದರು. ಈ ದೇಶದ 80% ಆಸ್ತಿ ಕೆವಲ ಮೂವರ ಬಳಿ ಇದೆ. ಇನ್ನುಳಿದ 20% ಆಸ್ತಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದವರ ಬಳಿ ಇದೆ. ನಾವು ಸತ್ಯ ಹೇಳಿದರೆ ನಮ್ಮನ್ನೇ ದೇಶ ವಿರೋಧಿ ಎಂದು ಬಿಂಬಿಸುವ ಕುತಂತ್ರ ಮಾಡುತ್ತಿದ್ದಾರೆ. ಹೀಗಾಗಿ ದಲಿತಪರ ಚಿಂತನೆಗಳು ಬದಲಾಗಬೇಕು ಎಂದು ಹೇಳಿದರು.

ನಮ್ಮನ್ನು ನಾವೇ ಮೇಲೆ ಎತ್ತುವ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಹಿಂದೇಟು ಹಾಕಿ ದೇವರ ಜಾತ್ರೆಗೆ ಇದ್ದ ಹಣ ಬಳಕೆ ಮಾಡುತ್ತಿರುವುದು ದುರದೃಷ್ಟಕರ. ದೇವರ ಮೇಲೆ ಪ್ರೀತಿ ಇದ್ದರೆ ಸ್ಥಳೀಯ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ, ಅದು ಬಿಟ್ಟು ಲಕ್ಷಾಂತರ ರೂ. ದೇವರ ಹೆಸರಲ್ಲಿ ಖರ್ಚು ಮಾಡಿ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.

ಸಮಾಜದ ಯುವಕರು, ವಿದ್ಯಾವಂತವರು, ನೌಕರರು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಋಣ ತೀರಿಸುವ ಕಾರ್ಯ ಮಾಡಬೇಕು. ಸಾಮಾಜಿಕ ವ್ಯವಸ್ಥೆಯಲ್ಲಿ ತಳ ಸಮುದಾಯದ ಮೇಲೆ ಅನೇಕ ಪದ್ದತಿಗಳನ್ನು ಹೇರಿದ್ದಾರೆ. ಇಂತಹ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಟ ಮಾಡಬೇಕೆಂದು ಸೂಚಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಎಸ್‌ಪಿ, ಟಿಎಸ್‌ ಪಿ ಯೋಜನೆಗೆ 30 ಸಾವಿರ ಕೋಟಿ ರೂ. ನೀಡಿದ್ದೇವು, ಆದರೆ ಬಿಜೆಪಿ ಸರ್ಕಾರ 20 ಸಾವಿರ ಕೋಟಿ ರೂ. ನೀಡಿ ಎಎಸ್‌ ಪಿ, ಟಿಎಸ್‌ ಪಿ ಯೋಜನೆಯ ಹಣವನ್ನು ಬೇರೆ ಕೆಲಸಗಳಿಗೆ ಬಳುಸುತ್ತಿದೆ ಎಂದು ಆರೋಪಿಸಿದರು.

ಭೂತರಾಮನಹಟ್ಟಿ ವಿರಕ್ತಮಠದ ಶ್ರೀ.ಶ್ರೀ.ಶ್ರೀ. ಷ.ಬ್ರ.ತ.ಧ. ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್.ಪಿ. ಸುಮನಾಕ್ಷರ್‌, ಬಿ.ಡಿ.ಎಸ್.ಎ ರಾಷ್ಟೀಯ ಸಂಯೋಜಕ ಸುಭಾಷೆ ಕಾನಡೆ, ಬಿ.ಡಿ.ಎಸ್. ಎ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಡಾ.ಸಿ. ವೆಂಕಟೇಶ, ಚೆಲುವರಾಜು, ಡಾ. ಎಂ. ರಾಮಚಂದ್ರಪ್ಪ ಸೇರಿದಂತೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಘಟಕದ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲೆಯ ಎಲ್ಲಾ ಎಸ್ಸಿ, ಎಸ್ಟಿ ಸಂಘಟನೆಗಳ ಮುಖಂಡರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ