Breaking News

ದ್ವೇಷ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಜನರಿಂದಲೇ ತಕ್ಕ ಪಾಠ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ


ಕಳೆದ ಬಾರಿ ಪ್ರಚಾರಕ್ಕೆ ಹೋಗದೆ ಜನ ಆಯ್ಕೆ ಮಾಡಿದ್ದು, ಈ ಬಾರಿ ವರ್ಷದ ಹಿಂದೆಯೇ ಬಿಲ್ಲು, ಬಾಣ ಇಟ್ಟುಕೊಂಡು ಕುಳಿತ್ತಿದ್ದೇವೆಂದ ಎಂದು ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟ ಶಾಸಕ ಸತೀಶ್‌ ಸಾಹುಕಾರ್‌

ಯಮಕನಮರಡಿ: ಅಭಿವೃದ್ಧಿಯಿಂದ ರಾಜಕೀಯ ಮಾಡಿ. ಅದು ಬಿಟ್ಟು ದ್ವೇಷದಿಂದ ರಾಜಕೀಯ ಮಾಡಿದರೆ ಜನರೆ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

 

ಯಮಕನಮರಡಿ ಮತಕ್ಷೇತ್ರದ ಶಹಾಬಂದರ ಮತ್ತು ಇಸ್ಲಾಂಪೂರ ಗ್ರಾಮಗಳ ವಾಲ್ಮೀಕಿ ವೃತ್ತದಲ್ಲಿ ಶ್ರೀ ವಾಲ್ಮೀಕಿ ಪ್ರತಿಷ್ಟಾಪನೆಗೆ ಅಡ್ಡಿ ಪಡಿಸುವವರ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣಾ ಪ್ರಚಾರಕ್ಕೆ ಹೋಗದೆ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಬಿಲ್ಲು, ಬಾಣ ಬಿಡದೆ ಚುನಾವಣೆಯಲ್ಲಿ ಜಯಗಳಿಸಿದ್ದೇವೆ. ಆದರೆ ಈ ಬಾರಿ ಒಂದು ವರ್ಷದ ಹಿಂದೆಯೇ ಬಿಲ್ಲು, ಬಾಣ ಇಟ್ಟುಕೊಂಡು ಕುಳಿತ್ತಿದ್ದೇವೆ ಎಂದು ವಿರೋಧಿಗಳಿ ಎಚ್ಚರಿಕೆ ರವಾನಿಸಿದರು.

ಯಮಕನಮರಡಿ ಕ್ಷೇತ್ರದಲ್ಲಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಅವರು, ಮೂರು ಬಸ್ ಶೆಲ್ಟರ್ ನಿರ್ಮಿಸಲು ಮುಂದಾಗಿದ್ದಾರೆ, ಆದರೆ ಈ ಭಾಗದ ಅಧಿಕಾರಿಗಳ ಗಮನಕ್ಕೂ ತಂದಿಲ್ಲ. ಇಸ್ಲಾಂಪೂರ ಸರ್ಕಲ್ ನಲ್ಲಿ ಬುದ್ದ, ಬಸವ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗಳನ್ನು ನಿರ್ಮಿಸಬೇಕಾಗಿದೆ. ವಾಲ್ಮೀಕಿ ಮೂರ್ತಿಯನ್ನು ವಾಲ್ಮೀಕಿ ವೃತ್ತದ ನಡುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇಲ್ಲಿ ಬಸ್ ಶೆಲ್ಟರ್ ಕಟ್ಟಲು ನಮ್ಮ ವಿರೋಧವಿದೆ. ನಿವು ಬಸ್ ಶೆಲ್ಟರ್ ನಿರ್ಮಾಣ ಮಾಡುವುದಾದರೆ ಬೇರೆ ಸ್ಥಳದಲ್ಲಿ ನಿರ್ಮಾಣ ಮಾಡಿಕೊಳ್ಳಿ. ನಮ್ಮ ಅಭ್ಯಂತರವಿಲ್ಲ ಎಂದರು.

ಕ್ಷೇತ್ರದಲ್ಲಿ ಸಣ್ಣ ಹಳ್ಳಿಗಳಿಗೆ 5 ರಿಂದ 6 ಕೋಟಿ ರೂ. ಅನುದಾನ ನೀಡಿದ್ದು, ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ದ್ವೇಷ ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ ಅವರು, ಮನುವಾದಿಗಳ ವ್ಯವಸ್ಥೆಯನ್ನು ಟಿಪ್ಪು ಸುಲ್ತಾನ್ ವಿರೋಧಿಸಿದ್ದರು. ಆದರೆ ಇಂದು ಟಿಪ್ಪು ಸುಲ್ತಾನ್ ಹೆಸರು ಹೇಳಿದರೆ ಸಾಕು ವಿವಾದ ಆಗುತ್ತಿದೆ. ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸಬಾರದು ಎಂದು ಹೇಳಿದರು.

 

ಬಿಜೆಪಿಯ ಅಜ್ಜ ಮನುವಾದ. ಈ ಮನುವಾದದ ವ್ಯವಸ್ಥೆಯಿಂದ ಹಿಂದುಳಿದ, ದೀನ ದಲಿತರು ಬಹಳಷ್ಟು ಶೋಷಣೆಗೆ ಒಳಗಾಗಿದ್ದಾರೆ. ಇಂತಹ ಅನೇಕ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ ವಿದೆ ಎಂದು ಸಲಹೆ ನೀಡಿದರು. ದೇಶಕ್ಕೆ ಸ್ವಾತಂತ್ರ್ಯ ನೀಡಿದ ಮಹಾತ್ಮ ಗಾಂಧೀಜಿ ಅವರನ್ನು ಬಿಜೆಪಿಯವರು ಮರೆತ್ತಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲುತ್ತಿಲ್ಲ.ಅದಕ್ಕೆ ಪೆರಿಯಾರ್ ಹೋರಾಟ ಕಾರಣ. ಅಂತಹ ಮಹಾನ್ ನಾಯಕರ ಜೀವನ ಚರಿತ್ರೆ ಓದಿ ತಿಳಿದುಕೊಳ್ಳಬೇಕು ಎಂದ ಶಾಸಕ ಸತೀಶ್‌ ಜಾರಕಿಹೊಳಿಯವರು, ಬಿಜೆಪಿ, ಆರ್ ಎಸ್ ಎಸ್ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣವರ ಫೋಟೋ ಹಾಕಲ್ಲ. ಯಾಕೆ ಹಾಕಲ್ಲ ಎಂದರೆ ಬಸವಣ್ಣ, ಅಂಬೇಡ್ಕರ್ ಅವರಿಗೆ ಹೆಚ್ಚು ಕಾಟ ಕೊಟ್ಟವರೆ ಮನುವಾದಿಗಳು ಎಂದರು.

 

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, 20 ವರ್ಷದ ಹಿಂದೆ ಈ ಭಾಗದಲ್ಲಿ ವಾಲ್ಮೀಕಿ ಸಮಾಜದ ಮೇಲೆ ಸಾಕಷ್ಟು ಅನ್ಯಾಯಗಳು ನಡೆದಿವೆ. ಈಗಲಾದರೂ ಸಮಾಜ ಬಾಂಧವರು ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು. ವಾಲ್ಮೀಕಿ ಸಮಾಜದವರು ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳಿದರು.

 

ಯಾರೋ ನಾಲ್ಕು ಜನ ಬಂದು ಯಮಕನಮರಡಿ ಕ್ಷೇತ್ರದಲ್ಲಿ ಭಾಷಣ ಮಾಡಿ ಹೋದರೆ ಕ್ಷೇತ್ರ ಅಭಿವೃದ್ಧಿ ಹೊಂದಲ್ಲ. ಹೀಗಾಗಿ ಅಂತಹ ವ್ಯಕ್ತಿಗಳನ್ನು ದೂರವಿಟ್ಟು, ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

 

ರಾಯಚೂರು ತಾಲೂಕು ಸಿಂದನೂರು ವಾಲ್ಮೀಕಿ ಪೀಠದ ವರದನಾರೇಶ್ವರ ಸ್ವಾಮೀಜಿ ಮಾತನಾಡಿ, ಸರ್ವಧರ್ಮದ ಅಭಿವೃದ್ದಿಯೇ ಶಾಸಕ ಸತೀಶ್ ಜಾರಕಿಹೊಳಿ ಅವರ ಕನಸಾಗಿದೆ. ಆದರೆ ಇಲ್ಲಿಯ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಿ ಪಡಿಸುತ್ತಿರುವ ಬಿಜೆಪಿವರ ನಡೆ ನಮಗೆ ಬೇಸರ ತರಿಸಿದೆ. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ರಾಜ್ಯದ ಜನತೆಗೆ ತಿಳಿಸುತ್ತಿರುವ ಸತೀಶ್ ಜಾರಕಿಹೊಳಿ ಅವರನ್ನು ಮತ್ತೊಮ್ಮೆ ಆರ್ಶೀವದಿಸಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ದಲಿತ ಮುಖಂಡ ಸಂತೋಷ ದೊಡ್ಡಮನಿ ಮಾತನಾಡಿ, ದುಡ್ಡ ಕೊಟ್ಟರು ಬಿಜೆಪಿಯವರಿಗೆ ಜನ ಸೇರಿಸಲು ಕಷ್ಟವಾಗುತ್ತಿರುವಂತಹ ವಾತಾವರಣದಲ್ಲಿ ಸತೀಶ್ ಅಣ್ಣಾ ಕರೆ ಕೊಟ್ಟರೆ ಲಕ್ಷ ಅಲ್ಲಾ ಕೋಟಿ ಜನ ಸೇರುತ್ತಾರೆ. ಇದೇ ಸತೀಶ್ ಅಣ್ಣಾ ಜಾರಕಿಹೊಳಿಯವರ ತಾಕತ್ತು. ಅವರ ಹೆಸರಿಗೆ ಧಕ್ಕೆ ತರುವ ಕೆಲಸವನ್ನು ಮಾಡಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

 

ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್‌ ಜಾರಕಿಹೊಳಿ, ಕಾಂಗ್ರೆಸ್ ಮುಖಂಡರಾದ ಮಕ್ತುಮಸಾಬ್‌ ಅಪ್ಪುಬಾಯಿ ಚಾಚಾ, ಶಂಕರ ಡೊಂಗರೆ, ಯಲ್ಲಪ್ಪಾ ಹಂಚಿನಮನಿ, ಮಂಜುನಾಥ್ ಪಾಟೀಲ್, ಮಹಾಂತೇಶ ಮಗದುಮ್, ಸಿದ್ದು ಸುಣಗಾರ, ವಿಜಯ ತಳವಾರ, ಕರೆಪ್ಪಾ ಗುರಣ್ಣವರ, ಜಂಗ್ಲಿಸಾಹೇಬ್‌ ನಾಯಕ, ಕಿರಣ ರಜಪೂತ ಸೇರಿದಂತೆ ಶಹಾಬಂದರ ಹಾಗೂ ಇಸ್ಲಾಂಪೂರ ಗ್ರಾಮದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ