Breaking News

*ಅರಭಾವಿ ಆಂಜನೇಯ ಮತ್ತು ಕಲ್ಲೊಳ್ಳಿ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*


ಮೂಡಲಗಿ*- ಹೊಸ ವರ್ಷದ ದಿನದಂದು ಕ್ಷೇತ್ರದ ಜನ ಕಲ್ಯಾಣ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯ ಸಂಕಲ್ಪದ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾನುವಾರ ಸಂಜೆ ಕ್ಷೇತ್ರದ ಅಧಿದೇವತೆ ಅರಭಾವಿಯ ಆಂಜನೇಯ ಮತ್ತು ಕಲ್ಲೋಳ್ಳಿ ಮಾರುತೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ನಮ್ಮ ಕ್ಷೇತ್ರ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಜನತೆಯು ಸುಖ, ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಬೇಕು. ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ. ಹೊಸ ವರುಷ ಎಲ್ಲರಿಗೂ ಹರುಷ ತರಲಿ. ದೇವರ ಅನುಗ್ರಹದಿಂದ ಈ ಜಗತ್ತು ನಡೆದಿದ್ದು, ನಮ್ಮೆಲ್ಲ ಕಷ್ಟ- ಕಾರ್ಪಣ್ಯಗಳನ್ನು ಪರಿಹರಿಸುವ ಶಕ್ತಿ ದೇವರಿಗೆ ಮಾತ್ರ ಇದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಮ್ಮೆಲ್ಲ ಹಿತ ಚಿಂತಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರೆಲ್ಲರೂ ಕೂಡಿಕೊಂಡು ಪ್ರಾಮಾಣಿಕತೆ ಯಿಂದ ಜನಸೇವೆ ಮಾಡೋಣ. ಜನರ ಹೃದಯಕ್ಕೆ ಹತ್ತಿರವಾಗಿ ಹೋಗೋಣ. ಅವರ ಸೇವೆಯನ್ನು ನಿಸ್ವಾರ್ಥ ಮನೋಭಾವನೆಯಿಂದ ಮಾಡೋಣ. ಒಳ್ಳೆಯದನ್ನು ಮಾತ್ರ ಮಾಡೋಣ. ಎಲ್ಲವನ್ನೂ ಮೇಲೆ ಕುಳಿತಿರುವ ದೇವರು ನೋಡುತ್ತಾನೆ ಎಂದು ತಿಳಿಸಿದರು.

ಕಳೆದ ೩೦ ವರ್ಷಗಳಿಂದ ನಮ್ಮ ಕುಟುಂಬವು ಜನಸೇವೆ ಮತ್ತು ರೈತ ಸೇವೆ ಮಾಡಿಕೊಂಡು ಬರುತ್ತಿದೆ. ನಮ್ಮನ್ನು ನಂಬಿರುವ ಜನರ ಉಪಕಾರವನ್ನು ತೀರಿಸಲು ಅಭಿವೃದ್ಧಿ ಪರ್ವದ ಮೂಲಕ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಅಭಿವೃದ್ಧಿಯೇ ಮೂಲ ಮಂತ್ರದ ತತ್ವದಡಿ ಕೆಲಸವನ್ನು ಮಾಡುತ್ತಿದ್ದೇವೆ. ದೇವರು, ತಾಯಿ- ತಂದೆಯವರ ಆಶೀರ್ವಾದ ಹಾಗೂ ಜನರ ಬೆಂಬಲದೊಂದಿಗೆ ಶಾಸಕ, ಸಚಿವ, ದೇಶದಲ್ಲಿಯೇ ಎರಡನೇ ಸಹಕಾರಿ ಸಂಸ್ಥೆಯಾಗಿರುವ ಕೆಎಂಎಫ್ ಅಧ್ಯಕ್ಷ ಸ್ಥಾನದಂತಹ ಮಹತ್ವದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಅವರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಅರಭಾವಿ ಮತ್ತು ಕಲ್ಲೊಳ್ಳಿ ದೇವಸ್ಥಾನದ ಪರವಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅದ್ಯಕ್ಷ ಬಸಗೌಡ ಪಾಟೀಲ, ಪರಪ್ಪ ಕಡಾಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸುಭಾಷ್ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಅಶೋಕ ಮಕ್ಕಳಗೇರಿ, ವಸಂತ ತಾಶೀಲ್ದಾರ, ಬಸು ಯಾದಗೂಡ, ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ರಾಯಪ್ಪ ಬಂಡಿವಡ್ಡರ, ನಿಂಗಪ್ಪ ಇಳಿಗೇರ, ಭೀಮಶಿ ಹಳ್ಳೂರ, ಲಕ್ಷ್ಮಣ ನಿಂಗನ್ನವರ, ರಮೇಶ ಸಂಪಗಾವಿ, ಕುಮಾರ ಪೂಜೇರಿ, ಅನೀಲ ಜಮಖಂಡಿ, ಸಿದ್ದು ಕಂಕಣವಾಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ