ಗೋಕಾಕ: ಮದುವೆ, ಸಭೆ -ಸಮಾರಂಭ ಅನುಕೂಲಕ್ಕಾಗಿ ಸಮುದಾಯಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಸಮಾಜ ಸೇವೆಗಾಗಿ ಸತೀಶ ಜಾರಕಿಹೊಳಿ ಫೌಂಡೇಶನ್ ನಿರಂತರ ಸಹಕಾರ ನೀಡಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ಹಿಲ್ ಗಾಡರ್ನ್ ಕಚೇರಿಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಅರಭಾವಿ ಕ್ಷೇತ್ರದ ದೇವಸ್ಥಾನ, ಮಸ್ಜಿದ್ ,ಚರ್ಚ್, ಟ್ರಸ್ಟಿಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿ ಅವರು ಮಾತನಾಡಿದರು.
ತಂದೆಯವರಾದ ಸತೀಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿ ಜತೆಗೆ ಸಮುದಾಯಗಳಿಗೆ ಸಾಕಷ್ಟು ಸಹಕಾರ ನೀಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಿದರು.
ಅರಭಾವಿ ಮತಕ್ಷೇತ್ರದ ಅರಭಾವಿ, ತುಕ್ಕಾನಟ್ಟಿ, ಬೈರನಟ್ಟಿ, ಮೂಡಲಗಿ, ಪಟಗುಂದಿ, ಗುರ್ಲಾಪುರ, ಅವರಾದಿ, ಸಂಗನಕೇರಿ ಗಳಿಗೆ ಕುರ್ಚಿ ಸೌಂಡ್ ಸಿಸ್ಟಮ್ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಮುಖಂಡರಾದ ಕಲ್ಲಪ್ಪಗೌಡ ಲಕ್ಕಾರ, ಲಗಮಣ್ಣ ಕಳಸನ್ನವರ, ಪಾಂಡು ರಂಗಸುಬೆ, ರಮೇಶ್ ಬಿಲಕುಂದಿ, ಭರಮಣ್ಣಾ ಉಪ್ಪಾರ , ಭೀಮಶಿ ಕಾರದಡಿ, ಮಲ್ಲಿಕ್ ಹುಣಸ್ಯಾಳ, ಜಡೆಪ್ಪಾ ಮಂಗಿ, ಆನಂದ ಟಪಾಳಗಾರ , ಬಾಳು ಬೇಡರ , ಮಲ್ಲಪ್ಪಾ ಕುಂಬಳಿ, ಮಹೇಶ್ ಚಿಕ್ಕೋಡಿ, ಮೀರಾ ಮಾಸ್ತರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.