ಕಾಗವಾಡ: ಪಟ್ಟಣದ ಬಸವನಗರದಲ್ಲಿ ಸುಮಾರು ೪೦ ರಿಂದ ೪೫ ವರ್ಷದಿಂದ ೭೦೦ ರದಿಂದ ೮೦೦ ಕುಟುಂಬಗಳು ವಾಸವಾಗಿವೆ.ಈಗ ಅಲ್ಲಿಯ ನೀವಾಸಿಗಳಿಗೆ ಶಾಸಕ ಶ್ರೀಮಂತ ಪಾಟೀಲ್ ರು ಬಡಕುಟುಂಬಗಳಿಗೆ ಆಸರೆಯಾಗಲಿ ಎಂದು ಸುಮಾರು 50 ಮನೆಗಳನ್ನ ಮಂಜೂರು ಮಾಡಿಸಿದ್ದಾರೆ.ಆ ಮನೆಗಳನ್ನ ಕಟ್ಟಿಕೊಳ್ಳಬೇಕಾದರೆ ಮನೆಯ ಹಕ್ಕುಪತ್ರಗಳು ಬೇಕು ಆದರೆ ಅಲ್ಲಿರುವ ಕೆಲ ಕುಟುಂಬಗಳಿಗೆ ಮನೆಹಕ್ಕುಪತ್ರ ಇದ್ದರೆ ಇನ್ನೂ ಕೆಲ ಕುಟುಂಬಗಳ ಮನೆಯ ಹಕ್ಕುಪತ್ರಗಳಿಲ್ಲ ಇದರ ಬೆನ್ನಲ್ಲೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹೊಸ ವರಸೆ ಎಂಭಂತೆ ಮನೆಯ ಉತಾರಗಳನ್ನೂ ನೀಡುತ್ತಿಲ್ಲ ಎಂದು ನಿವಾಸಿಗಳು ದೂರುತ್ತಿದ್ದಾರೆ.
ಇತ್ತ ಮಂಜೂರಾದ ಮನೆಗಳು ವಾಪಸ್ ಹೋಗುತ್ತಿವೆ ಎನ್ನುವ ಚಿಂತೆ ಒಂದೆಡೆಯಾದರೆ ಈತ್ತ ಪಟ್ಟಣ ಪಂಚಾಯತಿ ಮೂಖ್ಯಾಧಿಕಾರಿ ಸಮಸ್ಯೆ ಇನ್ನೊಂದೆಡೆ.ಹೀಗಾಗಿ ನಿವಾಸಿಗಳು ತಹಶಿಲ್ದಾರ ಕಛೇರಿ ಎದುರು ಧರಣಿ ನಡೆಸಿ ನಂತರ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇನ್ನು ಮನವಿ ಸಲ್ಲಿಸಿದ ನಂತರ ಗ್ರಾಮದ ಮುಖಂಡ ಜ್ಯೋತಿಕುಮಾರ ಪಾಟೀಲ್ ಮಾತನಾಡಿ,ಬಸವನಗರದಲ್ಲಿ ಅನೇಕ ವರ್ಷಗಳಿಂದ ಅಲ್ಲಿಯ ಕುಟುಂಬಗಳು ವಾಸ ಮಾಡುತ್ತಿದ್ದಾರೆ.ಬಸವನಗರವು ಕಾಗವಾಡ ಪಟ್ಟಣದ ಅವಿಭಾಜ್ಯ ಅಂಗವಾಗಿದ್ದು ಅಲ್ಲಿಯ ನಿವಾಸಿಗಳಿಗೆ ತೊಂದರೆಯಾದರೆ ಗ್ರಾಮದ ಮುಖಂಡರೆಲ್ಲರೂ ಸೇರಿಕೊಂಡು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ.ಆದಷ್ಟು ಬೇಗನೆ ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ತಹಶಿಲ್ದಾರರಿಗೆ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿದರು.
ಇದೆ ವೇಳೆ ಪ್ರಕಾಶ ದೊಂಡಾರೆ,ಅಮೀತ ದಿಕ್ಷಾಂತ,ಜಯಪಾಲ ಬಡಿಗೇರ,ಮಾತನಾಡಿದರು.
ಈ ವೇಳೆ ಮುಖಂಡರಾದ ರಮೇಶ ಚೌಗಲಾ,ಕಾಕಾ ಪಾಟೀಲ್, ಪ್ರಕಾಶ ದೊಂಡಾರೆ,ವಿನೋದ ಹುಲ್ಸಾರ,ಸುನೀಲ ಮದಭಾವಿ,ಜನಾರ್ಧನ ದೊಂಡಾರೆ,ಭುಜಂಗ ಕಾಂಬ್ಳೆ, ಸುರೇಶ ಕಾಂಬ್ಳೆ, ಅಸ್ಲಂ ಮಕಾಂದಾರ,ಸುರೇಶ ಕುರಣೆ,ಬಾಬು ಕಾಂಬ್ಳೆ, ಶಿವುಕುಮಾರ ಬಸ್ತಾರ,ಮಂಜು ಕಾಂಬ್ಳೆ, ಸುರೇಶ ಮಾದಿಗ,ಶೊಭಾ ದೊಂಡಾರೆ,ಸುವರ್ಣಾ ದೊಂಡಾರೆ,ಸುರತಾಬಾಯಿ ದೇವಣೆ,ಆಶಾ ಸಿಂಗೆ,ಲಲಿತಾ ಕಾಂಬ್ಳೆ ಸೇರಿದಂತೆ ಅನೇಕರು ಇದ್ದರು