ಗೋಕಾಕ: ಕರ್ನಾಟಕ ಹಾಲು ಒಕ್ಕುಟ ಮಹಾಮಂಡಳಿಯಿಂದ ಹಾಲು ಪೂರೈಸುವ ಉತ್ಪಾದಕ ಫಲಾನುಭವಿಗಳಿಗೆ ಸಹಾಯ ಧನ ಚೆಕ್ ಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಮಂಗಳವಾರದಂದು ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು.
4 ಹಾಲು ಸಂಗ್ರಹಿಸುವ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಒಟ್ಟು 19ಲಕ್ಷ ರೂ ಮೊತ್ತದ ಸಹಾಯ ಚೇಕ್, 6ಜನ ಫಲಾನುಭವಿಗಳಿಗೆ ಒಟ್ಟು 4ಲಕ್ಷ ಮೊತ್ತದ ರಾಸು ವಿಮೆ ಚೇಕ ಹಾಗೂ 13ಜನ ಫಲಾನುಭವಿಗಳಿಗೆ ಒಟ್ಟು 19ಲಕ್ಷ ಮೊತ್ತದ ರೈತ ಕಲ್ಯಾಣ ಚೇಕಗಳನ್ನು ಶಾಸಕರು ಹಾಲು ಉತ್ಪಾದಕ ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಎಮ್ ಬಿ ಪಾಟೀಲ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯಕ ನಿಂಗಪ್ಪ ಕುರಬೇಟ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಗೋಕಾಕ ಕೆಎಮ್‍ಎಫ್ ಕೇಂದ್ರ ಅಧಿಕಾರಿ ಎಸ್ ಬಿ ಕರಬನ್ನವರ, ಮೂಡಲಗಿ ಕೆಎಮ್‍ಎಫ್ ಕೇಂದ್ರ ಅಧಿಕಾರಿ ರವಿ ತಳವಾರ, ವಿಸ್ತರಣಾಧಿಕಾರಿ ವಿಠ್ಠಲ ಲೋಕೂರೆ, ಸಚೀನ ಪಡದಲ್ಲಿ, ಪಶುವೈದ್ಯರಾದ ಪ್ರಕಾಶ ಬೆಳಗಲಿ, ಈರಣ್ಣ ಕೌಜಲಗಿ ಸೇರಿದಂತೆ ಫಲಾನುಭವಿಗಳು ಇದ್ದರು.