ಬೆಳಗಾವಿ: ಹಿಂದೂ ಶಬ್ಧ ಅಶ್ಲೀಲ್ ಎಂಬ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಹೇಳಿಕೆ ಈಗ ದೇಶದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಪರವಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಸತೀಶ ಅಭಿಮಾನಿಗಳು ಐ ಸ್ಟ್ಯಾಂಡ್ ವಿತ್ ಸತೀಶ ಜಾರಕಿಹೊಳಿ ಅಭಿಯಾನ ಜೋರಾಗಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಾಸ್ಟರ್ ಮೈಂಡ್, ಯಾವುದೇ ವಿವಾದಕ್ಕೆ ಸಿಲುಕದ ಪ್ರಬುದ್ಧ ರಾಜಕಾರಣಿ ಎಂದು ಹೆಸರು ಪಡೆದುಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕರೂ ಆಗಿರುವ ಸತೀಶ ಜಾರಕಿಹೊಳಿ ಅವರ ಹಿಂದೂ ಅಶ್ಲೀಲ್ ಎಂಬ ಹೇಳಿಕೆ ಈಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಸತೀಶ ಜಾರಕಿಹೊಳಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದವರು ಸಮರ್ಥಿಸಿಕೊಳ್ಳುತ್ತಿಲ್ಲ. ಇದನ್ನೆ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ಸತೀಶ ಜಾರಕಿಹೊಳಿ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎನ್ನುವ ಒತ್ತಡ ಹಾಕುತ್ತಿದ್ದಾರೆ.

ಜಾಧವ ನಗರದ ಸತೀಶ ಜಾರಕಿಹೊಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನಾನು ಸಂಶೋಧನೆ ಮಾಡಿ ಹೇಳಿಕೆ ನೀಡಿಲ್ಲ. ವಿಕಿಪೀಡಿಯದಲ್ಲಿರುವುದನ್ನು ಹೇಳಿದ್ದೇನೆ ಎಂದು ಸ್ಪಷ್ಟಿಕರಣ ನೀಡಿದ ಮೇಲೆ ಸತೀಶ ಜಾರಕಿಹೊಳಿ ಅಭಿಮಾನಿಗಳು ಅವರ ಪರವಾಗಿ ಐ ಸ್ಟ್ಯಾಂಡ್ ವಿತ್ ಸತೀಶ ಜಾರಕಿಹೊಳಿ ಎಂಬ ಅಭಿಯಾನ ನಡೆಸಿ ವಿರೋಧಿಗಳಿಗೆ ಟಕ್ಕರ್ ಕೊಡುತ್ತಿದ್ದಾರೆ.
CKNEWSKANNADA / BRASTACHARDARSHAN CK NEWS KANNADA