ಗೋಕಾಕ : ನಗರದ ಬಸವೇಶ್ವರ ವೃತ್ತದಲ್ಲಿ ಹೆಚ್ಚುತ್ತಿದೆ ಟ್ರಾಫಿಕ್ ಕಿರಿಕಿರಿ ದಿನನಿತ್ಯವೂ ಟ್ರಾಫಿಕ್ ಕಿರಿಕಿರಿಗೆ ಸಾರ್ವಜನಿಕರು ಬೇಸತ್ತಿದ್ದಾರೆ.
ಇಂದು ಬಸವೇಶ್ವರ ವೃತ್ತದಿಂದ ಲಕ್ಷ್ಮೀ ಟಾಕೀಸ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು.
ಪಾರ್ಕಿಂಗ್ ಅವ್ಯವಸ್ಥೆ: ಪ್ರಮುಖ ರಸ್ತೆ ಮತ್ತು ನಗರದ ಒಳಭಾಗದ ರಸ್ತೆಗಳ ಬದಿಯಲ್ಲಿ ಸಮ ಮತ್ತು ಬೆಸ ಎಂದು ನಿಯಮ ಮಾಡಿದರು ಸಹಿತ ನಿಯಮ ಪಾಲನೆ ಆಗ್ತಾ ಇಲ್ಲ.
ಮನಸ್ಸಿಗೆ ಬಂದ ಹಾಗೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಾರುಗಳನ್ನು ನಿಲ್ಲಿಸುವವರು ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ ಇದಕ್ಕೆ ಕಾರಣ ಕೇವಲ ವಾಹನ ಸವಾರರು ಮಾತ್ರವಲ್ಲ ಅಂಗಡಿಕಾರರ ಪಾತ್ರವು ಬಹುಮುಖ್ಯವಾಗಿದೆ.
ದೊಡ್ಡ ದೊಡ್ಡ ಅಂಗಡಿಗಳಿಗೆ ಅನ್ವಯವಾಗದ ನಿಯಮಗಳು !
ನಗರದ ಮಾರ್ಕೆಟ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ನಿವಾರಣೆಗೆ ಸಮ ಬೆಸ್ ಎಂಬ ನಿಯಮಗಳನ್ನು ಜಾರಿಗೆ ತಂದಿದ್ದರು. ಆದರೆ ಈ ನಿಯಮ ಕೆಲವು ದಿನಗಳ ಮಟ್ಟಿಗೆ ಮಾತ್ರ ಪಾಲನೆಯಾಯಿತು. ತದನಂತರ ನಿಯಮಗಳನ್ನು ಗಾಳಿಗೆ ತೂರಿದರು.
ಕೆಲವು ದಿನ ಮಾತ್ರ ಎಚ್ಚೆತ್ತುಕೊಂಡ ಅಧಿಕಾರಿಗಳು ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ವಾಹನಗಳನ್ನು ಜಪ್ತಿ ಮಾಡುತ್ತಾರೆ.
ದೊಡ್ಡ ದೊಡ್ಡ ಅಂಗಡಿಕಾರರಿಗೆ ವ್ಯಾಪಾರಸ್ಥರಿಗೆ ಅನ್ವವಾಗುವುದಿಲ್ಲವೇ? ದೊಡ್ಡ ಅಂಗಡಿಕಾರರು ತಮ್ಮ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿಬಾರದು ಅಡ್ಡಲಾಗಿ ಕಂಬಗಳನ್ನು ಹಾಕುತ್ತಾರೆ. ಅಂತಹ ಕಂಬಗಳು ಕಂಡರೂ ಸಹಿತ ನಗರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಜಾಣ ಕುರುಡುತನ ತೋರುತ್ತಿದ್ದಾರೆ. ಹಾಗಾದರೆ ಸಾರ್ವಜನಿಕರು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು, ಇಲ್ಲಿ ಸಮ ಬೆಸ್ ನಿಯಮ ಹೇಗೆ ಪಾಲನೆ ಆಗುತ್ತೆ ಎಂದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.
ಟ್ರಾಫಿಕ್ ಕಿರಿಕಿರಿ ಇರುವ ಸ್ಥಳಗಳು : ಬಸವೇಶ್ವರ ವೃತ್ತ, ನಾಕಾ ನಂ 1 , ಚೌದರಿ ಕೂಟ, ಅಪ್ಸರಾ ಕೂಟ, ಮಾರ್ಕೇಟ್ ಹೀಗೆ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ.
ಹೆಚ್ಚಿನ ಪೊಲೀಸರು ಬೇಕು: ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿಸಬೇಕು. ವಿಶೇಷವಾಗಿ ಶಾಲೆ ಕಾಲೇಜು ಬಿಡುವ ಸಂದರ್ಭದಲ್ಲಿ ಪೊಲೀಸ ಸಿಬ್ಬಂದಿಗಳನ್ನು ಹೆಚ್ಚಿಸಿ ವಾಹನಗಳನ್ನು ನಿಯಂತ್ರಿಸಿ, ಮಕ್ಕಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಪೋಷಕರ ಒತ್ತಾಯವಾಗಿದೆ.
ಇನ್ನಾದರೂ ಪೋಲಿಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ಗೋಕಾಕದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸುತ್ತಾ ಎಂದು ಕಾಯ್ದು ನೋಡಬೇಕಾಗಿದೆ.