ಗೋಕಾಕ್: ಮಹಿಳೆಯೋರ್ವಳ ಕೊರಳಲ್ಲಿನ ಚಿನ್ನದ ಮಾಂಗಲ್ಯವನ್ನು ಎಗ್ಗರಿಸಿ ಫರಾರಿಯಾಗಿದ್ದ ಖದೀಮನನ್ನು ಗೋಕಾಕ ಶಹರ ಪೊಲೀಸರು ಖೇಡ್ಡಾಗೆ ಬಿಳಿಸುವಲ್ಲಿ ಯಶಸ್ವಿಯಾಗಿದ್ದು ಬಂಧಿತನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಶಪಡಿಕೊಂಡಿದ್ದಾರೆ.
ಈ ಪ್ರಕರಣ ಪತ್ತೆಗಾಗಿ ಗೋಕಾಕ ಡಿಎಸ್ ಪಿ ಮನೋಜಕುಮಾರ ನಾಯಿಕ ಅವರು ಗೋಕಾಕ ವೃತ್ತದ ಸಿಪಿಐ ಗೋಪಾಲ ರಾಠೋಡ ಅವರ ನೇತೃತ್ವದಲ್ಲಿ ಮತ್ತು ಗೋಕಾಕ ಶಹರ ಠಾಣೆಯ ಪಿ.ಎಸ್.ಐ ಎಮ್.ಡಿ.ಘೋರಿ ಹಾಗೂ ಎ.ಎಸ್.ಐ ಆರ್.ಬಿ.ಹಡಪದ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ಬಿ.ವಿ.ನೇರ್ಲಿ, ಸುರೇಶ ಈರಗಾರ, ಮಲ್ಲಪ್ಪ ಗಿಡಗಿರಿ, ಸಚೀನ ಹೊಳೆಪ್ಪಗೋಳ, ವಿಠಲ ನಾಯಕ, ರಮೇಶ ಮುರನಾಳೆ ಇವರನೋಳಗೊಂಡ ಒಂದು ತನಿಖಾ ತಂಡವನ್ನು ರಚಿಸಿದ್ದರು.
ಗೋಕಾಕದ ಲಕ್ಷ್ಮೀ ಪಾದಗಟ್ಟೆಯ ಬಂಗಾರದ ಅಂಗಡಿಗಳ ಹತ್ತಿರ ಯಸಂಶಯಾಸ್ಪದವಾಗಿ ತಿರುಗಾಡುತ್ತಿದ್ದವನಿಗೆ ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಲಾಗಿತು. ಬಳಿಕ ಈತ ಕಡಬಗಟ್ಟಿ ರಸ್ತೆಯಲ್ಲಿ ವಾಕಿಂಗ ಹೊರಟಿದ್ದ ಮಹಿಳೆಯ ಕೊರಳಲ್ಲಿಯ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡು ಹೋದ ಬಗ್ಗೆ ಒಪ್ಪಿಕೊಂಡಿದ್ದು, ಆರೋಪಿತನಿಂದ 40 ಗ್ರಾಂ ತೂಕದ 2,04,000ರೂ ಮೌಲ್ಯದ ಚಿನ್ನದ ಮಂಗಳಸೂತ್ರ ಶಪಡಿಸಿಕೊಂಡಿದ್ದಾರೆ.
ಸದರಿ ಪ್ರಕರಣ ಪತ್ತೆ ಮಾಡಿದ ತಂಡದ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಎಸ್.ಪಿ ಮಾಹಾನಿಂಗ ನಂದಗಾವಿ ಅವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.