ಘಟಪ್ರಭಾ : ಬಾಯ್ಸ್ 3 ಮರಾಠಿ ಚಲನಚಿತ್ರ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ನಾಳೆ ಬಿಡುಗಡೆ ಆಗಲಿರುವ ವಿವಾದಾತ್ಮಕ ಮರಾಠಿ ಚಲನಚಿತ್ರ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕ ವಿರೋಧಿಸಿ ಘಟಪ್ರಭಾ ಪೋಲಿಸ್ ಇನ್ಸಪೆಕ್ಟರ್ ರವರ ಮುಖಾಂತರ ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕಾರ್ಯಕರ್ತರನ್ನು ಉಧ್ಧೆಸಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರೈತ ಘಟಕದ ಜಿಲ್ಲಾಧ್ಯಕ್ಷ ರೆಹಮಾನ್ ಮೊಕಾಶಿ ಮಾತನಾಡಿ ವಿವಾದಾತ್ಮಕ ಮರಾಠಿ ಚಲನಚಿತ್ರ ಬಾಯ್ಸದಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ದೃಶ್ಯಗಳು ಇದ್ದು ಕರ್ನಾಟಕ ರಾಜ್ಯ ಪೋಲಿಸರನ್ನು ಅವಮಾನಿಸುವ ಸಂಭಾಷಣೆ ಇದೆ ಇದರಿಂದ ಕನ್ನಡ ಹಾಗೂ ಮರಾಠಿ ಸಹೋದರರ ಬಾಂಧವ್ಯಕ್ಕೆ ಧಕ್ಕೆ ಆಗಲಿದೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವುದರಿಂದ ಈ ಚಲನಚಿತ್ರ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಈ ಚಲನಚಿತ್ರ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ತಿವೃ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದರು ಈ ಸಂಧರ್ಭದಲ್ಲಿ ಕರವೇ ರೈತ ಘಟಕದ ತಾಲ್ಲೂಕು ಅದ್ಯಕ್ಷ ರವಿ ನಾವಿ ಮನವಿ ಓದಿದರು ಈ ಸಂಧರ್ಭದಲ್ಲಿ ಮಲ್ಲೇಶಿ ಗಾಡಿವಡ್ಡರ ರಾಜು ಗಾಡಿವಡ್ಡರ ತಬರೇಜ ಬೋಜಗಾರ ಲಕ್ಷ್ಮಣ ಗಾಡಿವಡ್ಡರ ಗೋಪಾಲ ಮಲ್ಲಾಪೂರ ಓಂಕಾರ ಸಿಂದಿಕುರಬೇಟ ರಮೇಶ್ ಗಾಡಿವಡ್ಡರ ದೇವೇಂದ್ರ ಮಲ್ಲಾಪೂರ ಗೌಡಪ್ಪ ಗಾಡಿವಡ್ಡರ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು
Check Also
*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …