ಮಹರ್ಷಿ ಶ್ರೀ ವಾಲ್ಮೀಕಿ ಯುವಕ ಹಾಗೂ ರಾಹುಲ್ ಅಣ್ಣಾ ಅಭಿಮಾನಿ ಬಳಗದ ನಾಪಫಲಕ ಉದ್ಘಾಟಿಸಿದ ರಾಹುಲ್ ಜಾರಕಿಹೊಳಿ
ಯಮಕನಮರಡಿ: “ಸಮಾಜದಲ್ಲಿ ತುಂಬಿದ್ದ ಅಜ್ಞಾನವನ್ನು ಹೊಗಲಾಡಿಸಲು ಶ್ರೀ ವಾಲ್ಮೀಕಿ ಅವರು ಅನೇಕ ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಮನುಕುಲದ ಜ್ಞಾನ ಜ್ಯೋತಿಯಾಗಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರನ್ನು ಮನದಲ್ಲಿ ನೆನೆದಾಗ ಮಾತ್ರ ಯುವಕರ ಭವಿಷ್ಯ ಉಜ್ವಲವಾಗುವುದು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಜುಮನಾಳ ಗ್ರಾಮದಲ್ಲಿ ಇಂದು ಮಹರ್ಷಿ ಶ್ರೀ ವಾಲ್ಮೀಕಿ ಯುವಕ ಹಾಗೂ ರಾಹುಲ ಅಣ್ಣಾ ಅಭಿಮಾನಿ ಬಳಗದ ನಾಪಫಲಕವನ್ನು ಯುವ ನಾಯಕ ರಾಹುಲ ಜಾರಕಿಹೊಳಿ ಅವರು ಉದ್ಘಾಟಿಸಿ ಮಾತನಾಡಿದ ಅವರು,
ಮಹರ್ಷಿ ಶ್ರೀ ವಾಲ್ಮೀಕಿ ಅವರ ನಾಮಫಲಕ ಉದ್ಘಾಟಿಸಿದರೆ ಸಾಲದು ನಿತ್ಯವೂ ಮನದಲ್ಲಿ ನೆನೆಯಬೇಕು. ಅವರು ರಚಿಸಿದ ರಾಮಾಯಣದಂತಹ ಅನೇಕ ಗ್ರಂಥಗಳನ್ನು ಮೆಲುಕು ಹಾಕುವ ಪ್ರಯತ್ನಗಳಾಗಬೇಕು. ಆ ಮಾರ್ಗದರ್ಶನದಲ್ಲಿ ನಡೆದು ಯುವಕರು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮ-ಗ್ರಾಮಗಳಲ್ಲಿ ಯುವಕರ ಸಂಘಟನೆ ಎಷ್ಟೂ ಬಲಿಷ್ಠವಾಗಿ ಬೆಳೆಯುತ್ತದೆ ಅಷ್ಟು ಸಮಾಜಮುಖಿ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಎಲ್ಲರನ್ನು ಒಗ್ಗೂಡಿಸುವ ಛಲ ಯುವಕರಲ್ಲಿದೇ- ನಾವೂ ಒಗ್ಗಟ್ಟಾಗಿದ್ದರೆ ಸಮಾಜದಲ್ಲಿನ ಸಮಸ್ಯೆಗಳನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.
ಬಳಿಕ ರಾಹುಲ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ಯುವಕರು ರಾಹುಲ್ ಜಾರಕಿಹೊಳಿಗೆ ಅವರಿಗೆ ಪುಷ್ಪಾರ್ಚನೆಗೈದು ಹರ್ಷವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕ ಮಲಗೌಡ ಪಾಟೀಲ ಹಾಗೂ ಊರಿನ ಸಮಸ್ತ ಗುರು-ಹಿರಿಯರು, ಮುಖಂಡರು ಮತ್ತು ಯುವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.