ಗೋಕಾಕ: ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಸುಮಾರು ನೂರಕ್ಕು ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರೀದ ಭಾರಿ ಮಳೆಗೆ ಮಾಣಿಕವಾಡಿ, ಮರಡಿಮಠ ಕ್ರಾಸ್ ಸೇರಿ ಕೊಣ್ಣೂರು ರಸ್ತೆಯ ಬದಿಯ ಮನೆಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದ್ದು, ಮೇಲ್ಮಟ್ಟಿ ಗುಡ್ಡದ ಪ್ರದೇಶದಲ್ಲಿ ಮೇಘ ಸ್ಫೋಟಗೊಂಡಿರಬಹುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ಮಾಣಿಕವಾಡಿ, ಕೊಣ್ಣೂರ ರಸ್ತೆಯ ಸುಮಾರು ೧೫೦ಕ್ಕು ಹೆಚ್ಚು ಮನೆಗಳಿಗೆ ಏಕಕಾಲದಲ್ಲಿ ನೀರು ನುಗ್ಗಿದೆ. ಮನೆಯಲ್ಲಿದ್ದ ಜನರು ನೀರಿನ ರಬಸ ಕಂಡು ಹೊರ ಓಡಿ ಬಂದಿದ್ದಾರೆ. ಕೆಲ ಮಹಿಳೆಯರು ಮನೆಯಲ್ಲಿಯೇ ಇರುವದನ್ನು ಮನಗಂಡ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಈ ಭಾಗದ ಸುಮಾರು ೨೫ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಅಲ್ಲದೇ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ಗಳು ಮತ್ತು ಗೋಕಾಕ ಕೊಣ್ಣೂರು ರಸ್ತೆ ಡಾಂಬರಿ ಮಳೆಯ ನೀರಿನ ರಬಸಕ್ಕೆ ಕೊಚ್ಚಿ ಹೋಗಿದೆ.
ತುರ್ತು ಸ್ಫಂಧಿಸಿದ ತಹಶೀಲದಾರ: ಮನೆಗಳಿಗೆ ನೀರು ನುಗ್ಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಢಾಯಿಸಿದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹಾಗೂ ತಂಡ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ಸ್ಫಂಧಿಸಿದರು.
ಸ್ಥಳೀಯರಿಂದ ಹಾನಿಗೊಳಗಾದ ಪ್ರದೇಶಗಳ ಮಾಹಿತಿ ಪಡೆದು, ಸಂತ್ರಸ್ತರಿಗೆ ಪರಿಹಾರ ಒದಗಿಸಿಕೋಡುವ ಭರವಸೆ ನೀಡಿದರು. ಕೊಣ್ಣೂರು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ, ಗ್ರಾಮಲೇಕ್ಕಾಧಿಕಾರಿ ಸೇರಿದಂತೆ ಜನಪ್ರತಿನಿಧಿಗಳು ಇದ್ದರು
CKNEWSKANNADA / BRASTACHARDARSHAN CK NEWS KANNADA