ಗೋಕಾಕ : ಯುವಕನ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಗರದ ಜಲಾಲ್ ಗಲ್ಲಿಯಲ್ಲಿ ಇಂದು ಮಂಗಳವಾರ ನಡೆದಿದೆ.
ಯುವಕ ಆಟ ಆಡುವ ಸಂದರ್ಭದಲ್ಲಿ ಬೀದಿ ನಾಯಿಯು ಯುವಕನ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೋಳಿಸಿದೆ. ಜಲಾಲ್ ಗಲ್ಲಿ ಸೇರಿದಂತೆ ನಗರದ ಇತರೆ ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ಪ್ರತಿನಿತ್ಯ ರಸ್ತೆಯಲ್ಲಿ ಜನರು ಓಡಾಡುವುದೇ ಕಷ್ಟವಾಗಿದೆ.

ಮಕ್ಕಳು ಆಟ ಆಡುವಾಗ, ಶಾಲೆಯಿಂದ ಬರುವಾಗ, ಹಿರಿಯ ನಾಗರಿಕರು ವಾಹುವಿಹಾರಕ್ಕೆ ಹೋದಾಗ ದಾಳಿ ಮಾಡುತ್ತಿವೆ. ಈ ಬಗ್ಗೆ ನಗರಸಭೆಗೆ ಅನೇಕ ಸಂಘಟನೆಗಳು ಹಾಗೂ ಸಾರ್ವಜನಿಕರು ದೂರು ನೀಡಿದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಶ್ವಾನಗಳ ಹಾವಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA