ಗೋಕಾಕ : ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ.
ನಗರದ ಜಿ.ಆರ್.ಬಿ.ಸಿ. ಕಾಲೋನಿಯಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ಹಿಡಿದುಕೊಂಡು ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದ್ದಾರೆ, ಸದರಿಯವನು ತಾನು ಮತ್ತು ಇನ್ನೊಬ್ಬ ಕೂಡಿಕೊಂಡು ಇದೇ ವರ್ಷ 2022 ಮಾರ್ಚ್ ತಿಂಗಳಲ್ಲಿ ಲಕ್ಷ್ಮೀ ಬಡಾವಣೆಯಲ್ಲಿಯ ಒಂದು ಮನೆ ಹಾಗೂ ಜುಲೈ ಆಶ್ರಯ ಬಡಾವಣೆಯಲ್ಲಿಯ ಒಂದು ಕಳ್ಳತನ ಮಾಡಿದ ಬಗ್ಗೆ ಹಾಗೂ ಜೂನ್ ತಿಂಗಳಲ್ಲಿ ವಿದ್ಯಾ ನಗರದಲ್ಲಿ ಒಂದು ಮನೆಯಲ್ಲಿ ಒಪ್ಪಿಕೊಂಡಿದ್ದು , ಆರೋಪಿತನಿಂದ 44 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1 ಕೆಜಿ 100 ಗ್ರಾಂ ಬೆಳ್ಳಿ ವಸ್ತುಗಳ ಸುಮಾರು 3.50.000 ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಡಿವಾಯ್ಎಸ್ಪಿ ಮನೋಜಕುಮಾರ ನಾಯಿಕ, ಸಿಪಿಐ ಗೋಪಾಲ ರಾಠೋಡ , ರವರ ನೇತೃತ್ವದಲ್ಲಿ ಗೋಪಾಹ ಶಹರ ಠಾಣೆಯ ಪಿಎಸ್ಐ ಎಂ ಡಿ ಘೋರಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಿ .ವ್ಹಿ ನೇರಳೆ , ಸುರೇಶ ಈರಗಾರ , ಮಲ್ಲಪ್ಪ ಗಿಡ್ಡಗಿರಿ, ಸಚೀನ ಹೊಳಪ್ಪಗೋಳ, ವಿಠ್ಠಲ ನಾಯಕ್ ರಮೇಶ ಮುರನಾಳ, ಪ್ರವೀಣ ಹೆಬ್ಬಾಳ ಅವರು ಮಾಡಿದ್ದಾರೆ.