ಗೋಕಾಕ: ಗೋಕಾಕ ನಗರಕ್ಕೆ ಹತ್ತು ಹಲವು ಯೋಜನಗೆಳನ್ನು ಶಾಸಕ ರಮೇಶ್ ಜಾರಕಿಹೊಳಿ ತರಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ ಅದರಂತೆ ಈಗಾಗಲೇ ನಗರಲ್ಲಿ ೨೪/೭ ಕುಡಿಯುವ ನೀರಿನ ಯೋಜನೆ, ಮಾಸ್ಟರ್ ಪ್ಲಾನ್, ಹಾಗೂ ಯುಜಿಡಿ, ಮತ್ತು ಚರಂಡಿ ನಿರ್ಮಣ ರಸ್ತೆ ಪಕ್ಕದಲ್ಲಿ ಪುಟ್ ಪಾತ್ ನಿರ್ಮಾಣ ಕಾಮಾಗರಿಗಳು ಕೆಲವು ಮುಕ್ತಾಯದ ಹಂತದಲ್ಲಿದ್ದರೆ ಇನ್ನೂ ಕೆಲವು ಮುಕ್ತಾಯಗೊಂಡಿವೆ.ಮಾಡಿದ ಕಾಮಗಾರಿಗಳು ಅರ್ಧಂಬರ್ಧ ಆಗಿರುವುದರಿಂದ ಗೋಕಾಕ ಜನ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಇಂದು ನಗರದ ಲಕ್ಷ್ಮೀ ಥಿಯೇಟರ್ ಬಳಿ ಲಕ್ಷಗಟ್ಟಲೆ ವೆಚ್ಚದಲ್ಲಿ ಇತ್ತಿಚಿಗೆ ನಿರ್ಮಾಣ ಮಾಡಲಾಗಿದ್ದ ಚರಂಡಿಯನ್ನು ನಗರ ಸಭೆಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಕೆಡವಲಾಗಿದೆ.ಹೊಸದಾಗಿ ನಿರ್ಮಿಸಿದ ಚರಂಡಿಯನ್ನು ಯಾಕೆ ಕೆಡವುತ್ತಿದ್ದಿರಿ ಅಂತ ಅಧಿಕಾರಿಗಳನ್ನು ಕೇಳಿದರೆ ಅವರು ಕಾಮಗಾರಿ ಮಾಡಿದವರ ಮೇಲೆ ದೂರುತ್ತಿದ್ದು ಸರಿಯಾಗಿ ಕಾಮಗಾರಿ ಆಗಿಲ್ಲ ಹೀಗಾಗಿ ಡೆಮಾಲಿಷ್ ಮಾಡುತ್ತಿದ್ದೆ ಎಂದು ಹೇಳುತ್ತಿದ್ದಾರೆ.
ನಗರದ ಸೌಂದರ್ಯಿಕರಣಕ್ಕೆ ಶಾಸಕ ರಮೇಶ್ ಜಾರಕಿಹೊಳಿಯವರು ಅನುದಾನ ಬಿಡುಗಡೆ ಮಾಡಿಸಿದರೆ ಅಧಿಕಾರಿಗಳು ಮಾತ್ರ ಅದನ್ನ ದುರ್ಬಳಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.