ಗೋಕಾಕ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಕನ್ನಡದಲ್ಲಿ ಕವಾಯತು ನೀಡಿ ಎಲ್ಲರ ಗಮನವನ್ನು ನಗರ ಪಿಎಸ್ಐ ಎಂ ಡಿ ಘೋರಿ ಸೆಳೆದರು.
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಶಹರ ಠಾಣೆ ಪಿಎಸ್‌ಐ ಎಂ.ಡಿ ಘೋರಿ ಅವರು ಧ್ವಜ ವಂದನೆ , ಮಾರ್ಚ್ ಫಾಸ್ಟ್ ಕಾರ್ಯಕ್ರಮವನ್ನು ಕನ್ನಡದಲ್ಲಿ ಕವಾಯತ ಆದೇಶ ನೀಡುವ ಮೂಲಕ ಕನ್ನಡ ಪ್ರೇಮ ಮೇರೆದರು.
ಪಿಎಸ್ಐ ಎಂ ಡಿ ಘೋರಿ ಅವರ ನೀಡಿದ ಕನ್ನಡ ಕವಾಯತಿಗೆ ಕನ್ನಡ ಪರ ಸಂಘಟನೆಗಳು ಹಾಗೂ ಕಾರ್ಯಕರ್ತರು, ಕರದಂಟು ನಾಡಿನ ಜನತೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.