ಗೋಕಾಕ ಅ 15 : ಸತೀಶ ಶುಗರ್ಸ್ ಲಿ. ಹುಣಶ್ಯಾಳ ಪಿ. ಜಿ. ಕಾರ್ಖಾನೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ವೀರನಗೌಡ ಪಾಟೀಲ, ಮುತ್ತೆಪ್ಪಾ ಪರನ್ನವರ ಪೂಜಾ ಕಾರ್ಯಕ್ರಮ ಹಾಗೂ ಧ್ವಜಾರೋಹಣವನ್ನು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರ್ಖಾನೆಯ ಚೇರಮನ್‍ರು ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಮಾತನಾಡಿ ನಮ್ಮ ದೇಶವು ತನ್ನ ಅತ್ಯಮುಲ್ಯವಾದ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ. ದೇಶದಿಂದ ಭ್ರಷ್ಟಾಚಾರದ ಹೊರ ಹಾಕಿದಾಗ ದೇಶ ಬಲಿಷ್ಠವಾಗಲು ಸಾಧ್ಯ ಎಂದು ಹೇಳಿದರು.
ಕೇವಲ ಐದುವರೆ ತಿಂಗಳ ಅವಧಿಯಲ್ಲಿ ಪ್ರತಿದಿನ 2.10 ಲಕ್ಷ ಲೀಟರ್ ಉತ್ಪಾದನಾ ಸಾಮರ್ಥ್ಯದ ಇಥೇನಾಲ ಘಟಕವನ್ನು ಪ್ರಾರಂಭಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು .
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ 85% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಸಂಸ್ಥೆಯ ಕಾರ್ಮಿಕ ಹಾಗೂ ಸಿಬ್ಬಂದಿಯವರ ಪ್ರತಿಭಾವಂತ ಮಕ್ಕಳಿಗೆ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ. ಡಿ. ಹಿರೇಮಠ, ಉಪಾಧ್ಯಕ್ಷರುಗಳಾದ ದಿಲೀಪ ಪವಾರ, ವೀರು ತಳವಾರ ಹಾಗೂ ಅಧಿಕಾರಿ ವರ್ಗದವರು, ಕಾರ್ಮಿಕ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.