ಮಹಾಲಿಂಗಪೂರ: ” ಸರ್ವಧರ್ಮ ಸಮಾನತೆಯಿಂದ ಕಾಣಿದಾಗ ಮಾತ್ರ ಜನರ ವಿಶ್ವಾಸ, ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ. ಬೆಳಗಾವಿಯಿಂದ ಬೆಂಗಳೂರು ಬೆಳೆಯಲು ಸಮಾನತೆಯ ಮೂಲಮಂತ್ರವೇ ಕಾರಣವಾಗಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದ ಶ್ರೀ ಮಹಾಲಿಂಗೇಶ್ವರ ಪೆಟ್ರೋಲಿಯಂ ಅವರ ನೂತನ ಬಂಕ್ ನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿ ಮಾತನಾಡಿದರು.
ಶಕ್ತಿ ಮೀರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೆವೆ. ಯಾವುದೇ ಜಾತಿ ಮೇಲೆ ವಿಶ್ವಾಸ ಇಟ್ಟಿಲ್ಲ. ಬುದ್ದ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗುತ್ತಿದ್ದೆವೆ ಹೀಗಾಗಿ ಉನ್ನತ್ತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಯಾವುದೇ ಜಾತಿ ಇಲ್ಲ, ಹೆಣ್ಣು-ಗಂಡು ಒಂದೇ ಜಾತಿ ಎಂದು ಪರಿಪಾಲನೆ ಮಾಡುತ್ತಿದ್ದೆವೆ. ಹೀಗಾಗಿ ಎಲ್ಲಾ ರಂಗದಲ್ಲಿ ಯಶಸ್ವಿ ಕಂಡಿದ್ದೆವೆ ಎಂದು ಹೇಳಿದರು.
ಸಮುದಾಯದ ಎಲ್ಲಾ ವರ್ಗದ ಜನರನ್ನು ಒಂದೇ ವೇದಿಕೆ ತಂದು ಜಾತ್ಯಾತೀತ ನೆಲೆಗಟ್ಟಿನ ಮೇಲೆ ಕಳೆದ 30 ವರ್ಷಗಳಿಂದ ಕೆಲಸ ಮಾಡಿದ ಪರಿಣಾಮವಾಗಿ, ವಿವಿಧ ಕ್ಷೇತ್ರಗಳಲ್ಲಿ ನನಗೆ ಕಾರ್ಯನಿರ್ವಸಲು ಸಾಧ್ಯವಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ಮಹಾಲಿಂಗೇಶ್ವರ ಪೆಟ್ರೋಲಿಯಂ ಉನ್ನತ್ತ ಮಟ್ಟಕ್ಕೆ ಬೆಳೆಯಲು ಗ್ರಾಹಕರನ್ನು ಆಕರ್ಷಣೆ ಮಾಡುವ ಅಗತ್ಯವಿದೆ. ಗ್ರಾಹಕರಿಗೆ ಗುಣಮಟ್ಟದ ಪೆಟ್ರೋಲ ನೀಡಿದಾಗ ಮಾತ್ರ ಇವೆಲ್ಲವೂ ಸಾಧ್ಯ. ಬಂಕ್ ಬರುವ ಗ್ರಾಹಕರು ದೇವರು ಸಮಾನ, ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಬ್ಬಂದಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಮಹಾಸ್ವಾಮಿಗಳು, ದತ್ತಾತ್ರೆ ಬೋಧ ಮಹಾಸ್ವಾಮಿಗಳು, ಶಾಸಕ ಸಿದ್ಧು ಸವದಿ , ಸರ್ವೋತ್ತಮ ಜಾರಕಿಹೊಳಿ, ಶಿವನಗೌಡ ಪಾಟೀಲ, ಸುರೇಶ ಅಮಟೆ, ಶುಭಾಷಗೌಡ ಪಾಟೀಲ, ಹನುಮಂತಣ್ಣ ತೇರದಾಳ ಮಲ್ಲನಗೌಡ ಪಾಟೀಲ, ಎ ಆರ್ ಬೆಳಗಲ್ಲಿ, ಪದ್ಮಜೀತ ನಾಡಗೌಡರ, ಸಿದ್ದುಗೌಡ ಪಾಟೀಲ, ಮಲ್ಲಿಕಾರ್ಜುನ ಕಬ್ಬೂರ, ರಮೇಶ ಕೆಸರಗೊಪ್ಪ, ಹನುಮಂತ ಕೊಣ್ಣೂರ, ಶಿವನಗೌಡ ಪಾಟೀಲ, ಭೀಮಗೌಡ ಪಾಟೀಲ, ಬಸವರಾಜ ಸಾಯನ್ನವರ ಹಾಗೂ ಇತರರು ಇದ್ದರು.