ಗೋಕಾಕ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಸರಗಳ್ಳತನವಾಗಿರುವ ಘಟನೆ ನಡೆದಿದೆ .ಪಟ್ಟಣದ ನಿವಾಸಿಯಾದ ಗೃಹಿಣಿಯೊಬ್ಬರು ಊರಿಂದ ಬಂದ ತಮ್ಮ ಸಂಬಂಧಿಗಳ ಜೊತೆ ಮಾರ್ಕೆಟ್ ಗೆ ಬಂದು ಮನೆಗೆ ವಾಪಸ್ಸು ತೆರಳುತ್ತಿರುವಾಗ ಕಂಬಾರ ಓಣಿಯ ಹತ್ತಿರದ ಮುಖ್ಯ ರಸ್ತೆಯಲ್ಲಿಯೇ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಎಸ್ಕೆಪ್ ಆಗಿದ್ದಾರೆ . ಬೈಕ್ ಸವಾರರು ಮಂಕಿ ಕ್ಯಾಪ್ ಧರಿಸಿದ್ದರು ಎಂದು ತಿಳಿದು ಬಂದಿದೆ .
ಸರ್ ಕಿತ್ತಕೊಂಡ ಕೂಡಲೇ ಪಟ್ಟಣದ ಕಂಬಾರ ಓಣಿಯಲ್ಲಿ ಹಾಯ್ದು ಹುಕ್ಕೇರಿ ಕಡೆ ಹೋಗಿದ್ದಾರೆಂದು ಹೇಳಲಾಗುತ್ತಿದೆ .ಮಾಂಗಲ್ಯ ಸರ ಸುಮಾರು 45 ಗ್ರಾಂ . ಇದ್ದು ಅಂದಾಜು ಎರಡು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದಾಗಿದೆ ಎನ್ನಲಾಗುತ್ತಿದೆ .ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವರ್ತರಾದ ಘಟಪ್ರಭಾ ಪೊಲೀಸರು ಸರಗಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ .ಈ ಮುಂಚೆ ಇಂಥ ವಿಫಲ ಪ್ರಯತ್ನಗಳು ನಡೆದಿರುವ ಬಗ್ಗೆ ಕೇಳಿಬರುತ್ತಿದ್ದು , ಪೋಲಿಸರು ಇದರ ಬಗ್ಗೆ ಎಚ್ಚರ ವಹಿಸಬೇಕಾಗಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ .