ಗೋಕಾಕ್ ತಾಲೂಕಿನ ಶಿಲ್ತಿಬಾವಿಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು 4 ವರ್ಷದ ಮಗನ ಕುತ್ತಿಗೆ ಇರಿದು ಹಾಕಿದ್ದು, ಮಗ ಸಾವಿಗೀಡಾಗಿದ್ದಾನೆ. ಪತ್ನಿ ಸ್ಥಿತಿ ಗಂಭೀರವಾಗಿದ್ದು, ಗೋಕಾಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಸಂಜೆ ಘಟನೆ ನಡೆದಿದೆ. ಕಬ್ಬಿನ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡಿದ 28 ವರ್ಷದ ಮುತ್ತೆಪ್ಪ ಅಕ್ಕಾನಿ ತನ್ನ ಪತ್ನಿ 25 ವರ್ಷದ ಲಕ್ಷ್ಮೀ ಮತ್ತು 4 ವರ್ಷದ ಪುತ್ರ ಬಾಳೇಶ್ ನ ಕುತ್ತಿಗೆಗೆ ಇರಿದಿದ್ದಾನೆ.
ಎಸ್ಪಿ ಸಂಜೀವ್ ಪಾಟೀಲ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ