ಬೆಳಗಾವಿ: ಸಿಎಂ ಯಾರು ಎಂದು ಈಗ ಹೇಳುವುದು ಕಷ್ಟ. ಪಕ್ಷ, ವ್ಯಕ್ತಿಗಳ ವಿಷಯ ಬರಲ್ಲ. ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ ಎಂದು ನಾವು ಹೇಳುತ್ತೇವೆ. ಸಿದ್ದರಾಮೋತ್ಸವದಿಂದ ಪಕ್ಷಕ್ಕೆ ಶಕ್ತಿ ಬರಲಿದೆ, ಗೊಂದಲದ ಪ್ರಶ್ನೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ದಕ್ಷಿಣ ನಮ್ಮ ಟಾರ್ಗೆಟ್ ಇಲ್ಲ. ಸವದತ್ತಿ, ರಾಯಬಾಗ, ಹಾರೋಗೇರಿ ಎಲ್ಲಾ ಕಡೆಗಳಲ್ಲಿ ಸಂಘಟನೆಯ ದೃಷ್ಟಿಯಿಂದ ಸಭೆ ನಡೆಸೋಣ. ಅಭ್ಯರ್ಥಿ ಯಾರು ಎಂದು ಆಮೇಲೆ ನೋಡೋಣ. ಮೊದಲು ಪಕ್ಷ ಸಂಘಟನೆ ಮಾಡೋಣ. ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನಮ್ಮ ಪ್ರಯತ್ನ. ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಹೇಳುವ ಪ್ರಯತ್ನ. ಜಿಲ್ಲೆಯ 18 ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡುತ್ತೇವೆ.
ದಕ್ಷಿಣ ಕ್ಷೇತ್ರದ ಮತ ಹೆಚ್ಚು ಮಾಡಲು ಪ್ರಯತ್ನಿಸುತ್ತೇವೆ. ಬೇಸ್ ಗಟ್ಟಿ ಇದ್ದರೆ ಅಭ್ಯರ್ಥಿ ಬರ್ತಾರೆ. ಮೂರು ಚುನಾವಣೆಯಲ್ಲಿ ಬೇರೆ-ಬೇರೆ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಚುನಾವಣೆ ಮುಗಿದ ಬಳಿಕ ಸಂಘಟನೆಯ ಕಡೆ ಗಮನ ಹರಿಸಬೇಕು. ಮಾಜಿ ಶಾಸಕರು, ಅಭ್ಯರ್ಥಿ ಇಲ್ಲದ ಕಡೆಯಲ್ಲಿ ನಾವೇ ಸಂಘಟನೆ ಜವಾಬ್ದಾರಿ ವಹಿಸಿದ್ದೇವೆ. ಪಕ್ಷದ ಅಧ್ಯಕ್ಷ ಬದಲಾವಣೆ ಚರ್ಚೆ ಸದ್ಯ ಇಲ್ಲ ಎಂದರು.
ಮಹಾನಗರ ಕಾಂಗ್ರೆಸ್ ಅಧ್ಯಕ್ಷರು ಸಭೆಗೆ ಗೈರು ಕುರಿತು ಪ್ರತಿಕ್ರಿಯಿಸಿ, ನಾವು ಮೊದಲೇ ಹೇಳಿದ್ದೇವೆ. ನೀವು ಬೆಳಗಾವಿ ಉತ್ತರ ಕ್ಷೇತ್ರ ನೋಡಿಕೊಳ್ಳಿ. ನಾವು ಬೆಳಗಾವಿ ದಕ್ಷಿಣ ಮತಕ್ಷೇತ್ರ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಸಹ ಚರ್ಚೆ ಆಗಿದೆ ಎಂದರು. ಸೇಠ್ ಬ್ರದರ್ಸ್ ಫೋಟೋ, ಬ್ಯಾನರ್ನಲ್ಲಿ ಮಾಯ ಕುರಿತು ಮಾತನಾಡಿ, ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು.
ಶಾಸಕ ಜಮೀರ್ ಅಹ್ಮದ್ ಖಾನ್ಗೆ ನೋಟಿಸ್ ಕುರಿತು ಪ್ರತಿಕ್ರಿಯಿಸಿ, ನಮಗೆ ಸಂಬಂಧಪಟ್ಟ ವಿಚಾರ ಇದಲ್ಲ. ರಾಜಕೀಯ ಅಂದರೆ ಗೊಂದಲೇ ಇರಲೇಬೇಕು, ಇರುತ್ತೆ. ಪಕ್ಷದಲ್ಲಿ ನಮ್ಮ ವಿಚಾರ ಪ್ರಸ್ತಾಪ ಮಾಡಲು ಎಲ್ಲರೂ ಸ್ವತಂತ್ರರು. ಸಿಎಂ ಯಾರು ಎಂದು ಈಗ ಹೇಳುವುದು ಕಷ್ಟ. ಪಕ್ಷ, ವ್ಯಕ್ತಿಗಳ ವಿಷಯ ಬರಲ್ಲ. ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ ಎಂದು ನಾವು ಹೇಳುತ್ತೇವೆ. ಸಿದ್ದರಾಮೋತ್ಸವದಿಂದ ಪಕ್ಷಕ್ಕೆ ಶಕ್ತಿ ಬರಲಿದೆ, ಗೊಂದಲದ ಪ್ರಶ್ನೆ ಇಲ್ಲ ಎಂದರು.
CKNEWSKANNADA / BRASTACHARDARSHAN CK NEWS KANNADA