ವಿಜಯಪುರ ನಗರದ ಹೆಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ನವ ಚಿಂತನಾ ಸಂಕಲ್ಪ ಶಿಬಿರ ಹಾಗೂ ಕಾರ್ಯಾಗಾರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕಳೆದ ಏಂಟು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶವನ್ನು ಆಳುತ್ತಿದ್ದು, ದೇಶಕ್ಕೆ ಏನು ಕೊಡುಗೆ ನೀಡಿದೆ..? ಬಿಜೆಪಿ ಸರ್ಕಾರ ಸಾರ್ವಜನಿಕರ ಮೇಲೆ ಎಲ್ಲಾ ರೀತಿಯ ಒತ್ತಡ ಹೇರುವ ಕೆಲಸ ಮಾಡುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಸರಿಯಾದ ಸೌಲಭ್ಯ ಕೂಡ ನೀಡುತ್ತಿಲ್ಲ. ಕಾರಣ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಲಾಯಿತು.
ಕಾಂಗ್ರೆಸ್ ಪಕ್ಷ ಸಂಘಟಿಸಬೇಕೆಂದರೆ ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಚಿಂತನ-ಮಂಥನ ಶಿಬಿರ ನಡೆಸಬೇಕು. ಪಕ್ಷ ಎಲ್ಲರಿಗೂ ಅಧಿಕಾರ ನೀಡಲು ಸಾಧ್ಯವಿಲ್ಲ. ಆದರೆ ದೇಶದ, ರಾಜ್ಯದ ಸರ್ವ ಪ್ರಗತಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಗತ್ಯವಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕರಾದ ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತಗೌಡ ಪಾಟೀಲ್, ರಾಜ್ಯ ಸಭಾ ಸದಸ್ಯರಾದ ನಾಶಿರ್ ಅಹಮ್ಮದ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ್, ಪ್ರಕಾಶ ಹುಕ್ಕೇರಿ, ಕೆಪಿಸಿಸಿ ಜನರೆಲ್ ಸಕ್ರೆಟರಿ ಕಾಂತಾ ನಾಯಕ, ಶ್ರೀಕಾಂತ ಪಾಟೀಲ, ಪ್ರಕಾಶ ಆಲಗೋರೆ, ಅಬ್ದುಲ್ ಹಮ್ಮಿದ್ ಮುರ್ಷಫ್, ಜಿಲ್ಲಾಧ್ಯಕ್ಷ ರಾಜು ಆಲಗೋರೆ, ಡಾ. ಗಂಗಾಧರ ಸಂಬಣ್ಣಿ, ಅನಪೂರ್ಣ ತುಂಗಳ, ಮಾಜಿ ಶಾಸಕ ವಿಠ್ಠಲ ಕಡಕತುಂಡೆ, ಅಶೋಕ ಮನಗುಳಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.