ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಬೆನ್ನಲ್ಲೇ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಲಘು ಭೂಕಂಪವಾಗಿದೆ.
ಶನಿವಾರ ಬೆಳಗ್ಗೆ 6:45ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.ಯಾವುದೇ ಹಾನಿ ಸಂಭವಿಸಿಲ್ಲ. ಸುಮಾರು ಐದಾರು ಸೆಕೆಂಡ್ ಭೂಮಿ ಕಂಪನವಾಗಿದೆ.
ಧಾರಾಕಾರ ಮಳೆ ಸುರಿಯುತ್ತಿರುವುದರ ಜತೆಗೆ ಲಘು ಭೂಕಂಪನ ಆಗಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಡಿಎಸ್ ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಿಜಯಪುರದಲ್ಲಿ 4.4 ತೀವ್ರತೆಯ ಭೂಕಂಪ – ಅಥಣಿಯಲ್ಲಿಯೂ ಆಘಾತದ ಅನುಭವ ಶಿರಹಟ್ಟಿ, ಅಥಣಿ ತಾಲೂಕಿನ ಚಿಕ್ಕೋಡಿ ತಾಲೂಕಿನಲ್ಲಿಯೂ ಕಂಪನದ ಅನುಭವವಾಗಿದೆ. ಕೇಂದ್ರಬಿಂದು: ಕಣ್ಣೂರು GP, ವಿಜಯಪುರ ತಾಲೂಕು, ವಿಜಯಪುರ ಜಿಲ್ಲೆಯ 2.3 ಕಿಮೀ NW (ವಿಜಯಪುರ ಮತ್ತು ಮಹಾರಾಷ್ಟ್ರ ಪ್ರದೇಶದ ಗಡಿ) ಪ್ರಮಾಣ: 4.4 ದಿನಾಂಕ: 09.07.2022 ಸಮಯ: 06:22:14 AM ಕೋ-ಆರ್ಡಿನೇಟ್ಸ್: ಲ್ಯಾಟ್: 17.0398°N; ಉದ್ದ: 75.6818° ಇ ಆಳ: 10 ಕಿಮೀ