ಮೂಡಲಗಿ : ಯುವ ಜನತೆ ದುಶ್ಚಟ ಮಾಡದೆ, ದೇವರ ಕಾರ್ಯ, ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಯುವಕರಿಗೆ ಕರೆ ನೀಡಿದರು.
ನಗರದ ಶ್ರೀ ವೆಂಕಟೇಶ್ವರ ದೇವಸ್ತಾನದ ಸಪ್ತಾಹ ಮತ್ತು ಅಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ಷೇತ್ರದ ಪ್ರತಿ ಸಮಾಜಮುಖಿ ಕಾರ್ಯಕ್ರಮಗಳಿಗೆ ನಾವು ಸದಾ ನಿಮ್ಮೋಂದಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ, ಇಂದಿನ ಯುವ ಜನತೆ ದುಶ್ಚಟಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ, ದೈವ ಭಕ್ತರಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ದತ್ತಾತ್ರೇಯಭೋಧ ಮಹಾಸ್ವಾಮಿಗಳು ಶ್ರೀಸಿದ್ದ ಸಂಸ್ಥಾನ ಮಠ ಮೂಡಲಗಿ ಹಾಗೂ ಶ್ರೀ ಶ್ರೀ ಮಹರ್ಷಿ ಧರ್ಮಶ್ರೀ ಶಿವಸಿದ್ದ ಸೋಮೇಶ್ವರ ಶಿವಚಾರ್ಯ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಮುಕ್ತಿಮಠ ಹಾಗು ಶ್ರೀ ಶಿವಾನಂದ ಮಹಾಸ್ವಾಮಿಗಳು ಖಾನಟ್ಟಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೆಖರಗೋಳ, ಸಂತೋಷ ಸೋನವಾಲಕರ,ಪುರಸಭೆ ಅದ್ಯಕ್ಷ ಹಣಮಂತ ಗುಡ್ಲಮನಿ, ಪಿಎಸ್ಐ ಎಚ್ ವಾಯ್ ಬಾಲದಂಡಿ,ವೆಂಕಟೇಶ ಸೋನವಾಲಕರ, ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಸಾಬು ಸಣ್ಣಕ್ಕಿ, ಸುಪ್ರೀತ್ ಸೋನವಾಲಕರ, ಬಸು ಝಂಡೆಕುರುಬರ್, ರಾಮಣ್ಣಾ ಝಂಡೆಕುರುಬರ, ಚೆನ್ನಪ್ಪ ಝಂಡೆಕುರುಬರ, ಗುಂಡು ಪೂಜೆರಿ ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು.