ಬೆಳಗಾವಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಪತ್ತೆಯಾದ 7 ಭ್ರೂಣಗಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೂಡಲಿಗೆ ಪಟ್ಟಣದ ವೆಂಕಟೇಶ್ ಹೆರಿಗೆ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ.ಮೂಡಲಗಿ ಪಟ್ಟಣದ ವೆಂಕಟೇಶ್ ಹೆರಿಗೆ ಮತ್ತು ಸ್ಕ್ಯಾನಿಂಗ್ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಅಭಾಷನ್ ಮಾಡಿದ್ದ 7 ಭ್ರೂಣಗಳನ್ನು ಪೊಲೀಸರ ತನಿಖೆ ಭಯದಿಂದ ಸಿಬ್ಬಂದಿಗಳು ಹಳ್ಳದಲ್ಲಿ ಬಿಸಾಕಿದ್ದರು ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಬಯಲಾಗಿದ್ದು, ತಮ್ಮದೇ ಆಸ್ಪತ್ರೆಯಲ್ಲಿ ಭ್ರೂಣಗಳು ಎಂದು ವೆಂಕಟೇಶ್ ಅಸ್ಪತ್ರೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಸದ್ಯ ಡಿಹೆಚ್ ಒ ಆಸ್ಪತ್ರೆಯನ್ನು ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.