ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಜಿಬಿಷನ್ ನ ನೂತನ ತಂತ್ರಜ್ಞಾನ ಯಂತ್ರೋಪಕರಣ ಪ್ರದರ್ಶನಕ್ಕೆ ಶಾಸಕ ಸತೀಶ ಜಾರಕಿಹೊಳಿ ಭೇಟಿ
ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಔದ್ಯೋಗಿಕರಣ ಕಾಂತ್ರಿ ಹೆಚ್ಚಿಸುವ ನಿಟ್ಟಿನಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಜಿಬಿಷನ್ ವತಿಯಿಂದ ನೆಲಮಂಗಲ ರಸ್ತೆ ಬಳಿ ಆಯೋಜಿಸಲಾದ ನೂತನ ತಂತ್ರಜ್ಞಾನ ಯಂತ್ರೋಪಕರಣ ಪ್ರದರ್ಶನಕ್ಕೆ ಭೇಟಿ ನೀಡಿದರು.
ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಜಿಬಿಷನ್ ನಲ್ಲಿ ಹೆಸರಾಂತ ಅನೇಕ ಕಂಪನಿಗಳು ಭಾಗವಹಿಸಿದ್ದವು. ನೋಡುಗರ ಕಣ್ಮನ ಸೆಳೆದವು. ಈ ಪ್ರರ್ದಶನಲ್ಲಿ ರೋಬೊಟ್ ತಂತ್ರಜ್ಞಾನ, ಇಎನ್‌ಸಿ ಯಂತ್ರಗಳ ಬಗ್ಗೆ ಸತೀಶ ಜಾರಕಿಹೊಳಿ ಹಾಗೂ ಮಕ್ಕಳಾದ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಜೊತೆ ಮಾಹಿತಿ ಪಡೆದರು.
ನೂತನ ತಂತ್ರಜ್ಞಾನದಿಂದ ಹೆಚ್ಚು ಉದ್ಯೋಗ ಸೃಷ್ಟಿ: ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ನಿರುದೋಗ್ಯ ಕೊರತೆ ಕಾಡುತ್ತಿದ್ದು, ಗುಣಮಟ್ಟದ ಕಂಪನಿಗಳು ಈ ಭಾಗದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿದರೆ, ಈ ಕೊರತೆ ನೀಗಿಸಬಹುದು. ಜತೆ ಜತೆಗೆ ಅಭಿವೃದ್ಧಿಯಾಗುವ ಸಾಧ್ಯತೆಗಳಿವೆ. ಹೆಸರಾಂತ ಕಂಪನಿಗಳು ಕೈ ಜೋಡಿಸಿದರೆ ನಿರುದೋಗ್ಯಸ್ಥರು ಬೆಳಕು ಕಾಣಬಹುದು. ಆಧುನಿಕ ತಂತ್ರಜ್ಞಾನವನ್ನು ಅವಿಷ್ಕಾರಗೊಂಡರೆ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
11 ತಿಂಗಳಿನಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ: ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಬಳಿ 2016 ರಲ್ಲಿ ಕೇವಲ 11 ತಿಂಗಳಿನಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಿ, ದೇಶದ ಔದ್ಯೋಗಿಕ ಕ್ಷೇತ್ರದಲ್ಲಿ ಹೊಸದೊಂದು ದಾಖಲೆ ಸೃಷ್ಟಿ ಮಾಡಿರುವ ಶ್ರೇಯಸ್ಸು ಸತೀಶ ಜಾರಕಿಹೊಳಿ ಅವರದ್ದು, ಗುಣಮಟ್ಟದ ಕಂಪನಿಗಳನ್ನು ಉತ್ತರ ಕರ್ನಾಟಕದಲ್ಲಿ ನೆಲೆಯೂರಿದರೆ ಲಕ್ಷಾಂತರ ಬಡ ಜೀವಗಳ ಬದುಕು ಹಸನಾಗಲಿದೆ. ಈ ಕಂಪನಿಗಳಿಂದ ಹೆಚ್ಚು ಉದ್ಯೋಗ ಸೃಷ್ಟಿಯಾದರೆ ನಿರೋದ್ಯಗಸ್ಥರಲ್ಲಿ ಆಶಾಕಿರಣ ಮೂಡಲಿದೆ. ಆದ್ದರಿಂದ ಇಂತಹ ತಂತ್ರಜ್ಞಾನ ಕಂಪನಿಗಳು ಈ ಭಾಗದಲ್ಲಿಯೂ ನಿರ್ಮಾಣ ಮಾಡುವ ಹಂಬಲ ಶಾಸಕ ಸತೀಶ ಜಾರಕಿಹೊಳಿ ಅವರಿಗಿದೆ.
ತಂದೆ ಜತೆ ತಂತ್ರಜ್ಞಾನ ವೀಕ್ಷಣೆ ಮಾಡಿದ ಮಕ್ಕಳು: ಸಮಾಜ ಸೇವೆಗಾಗಿ ಹಗಲಿರುಳು ನಿರಂತರವಾಗಿ ಶ್ರಮಿಸುತ್ತಿರುವ ಪ್ರಿಯಾಂಕಾ, ರಾಹುಲ್ ಅವರು ಅಲ್ಪ ಸಮಯದಲ್ಲಿ ತಂದೆ ಶಾಸಕ ಸತೀಶ ಜಾರಕಿಹೊಳಿ ಅವರ ಜತೆ ಬೆಂಗಳೂರಿನ ಇಂಟರ್ ನ್ಯಾಷನಲ್ ಎಕ್ಜಿಬಿಷನ್ ನ ಯಂತ್ರೋಪಕರಣ ಪ್ರದರ್ಶನದಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.