ಗೋಕಾಕ: ನಗರದ ನವೀನ್ ಪೆಗ್ ಬಾರ್ ವಿದ್ಯಾ ನಗರದಲ್ಲಿ ಹಾಡು ಹಗಲೇ ಖದೀಮರ ತಂಡವೊಂದು ಮಹಿಳೆಯನ್ನು ಅಡ್ಡಹಟ್ಟಿ ನಾವು ಪೊಲೀಸರಿದ್ದಿವಿ.. ನಿಮಗೆ ಎಷ್ಟು ಕೂಗಿದರೂ ಸಹ ನೀವು ಕೇಳಲಿಲ್ಲ. ನೀವು ಹೆಲ್ಮೆಟ್ ಯಾಕೆ ಹಾಕಿಲ್ಲ ಅಂತ ಮಹಿಳೆಯನ್ನು ಮಾತಿಗೆಳೆದು ಮೈ ಮೇಲೆ ಈ ರೀತಿ ಬಂಗಾರದ ಆಭರಣಗಳನ್ನು ಹಾಕಿಕೊಂಡು ತಿರುಗಾಡಬಾರದು ಎಂದು ಆಕೆಗೆ ಬುದ್ದಿವಾದ ಹೇಳಿದಂತೆ ಮಾಡಿತ್ತಲೇ ಇನ್ನೊಂದು ಬೈಕ್ ಮೇಲೆ ಬಂಗಾರದ ಆಭರಣ ಹಾಕಿಕೊಂಡು ಬಂದ ಕಳ್ಳರ ಗುಂಪಿನ ಮತ್ತೋರ್ವ ಸದಸ್ಯನ್ನೂ ಸಹ ಮಹಿಳೆಯ ಮುಂದೆಯೇ ನಕಲಿ ಪೊಲೀಸರು ಬೈದು ಅವನ ಮೈಲಿನ ಒಡವೆಯನ್ನು ತೆಗೆದು ಕೊಡುವಂತೆ ಸೂಚಿಸಿದ್ದಾರೆ. ಕಳ್ಳರ ಗುಂಪಿನ ಸದಸ್ಯನೇ ಆಗಿದ್ದ ಆತ ಮಹಿಳೆಯ ಮುಂದೆ ತನ್ನ ಮೈ ಮೇಲಿದ್ದ ಬಂಗಾರದ ವಸ್ತುಗಳನ್ನು ತೆಗೆದು ಪೊಲೀಸರ ಸೋಗಿನಲ್ಲಿದ್ದ ಖದೀಮರ ಕೈಗೆ ಇಟ್ಟಿದ್ದಾನೆ. ಆಗ ಮಹಿಳೆಗೂ ಸಹ ನಿಮ್ಮ ಬಂಗಾರವನ್ನೂ ಸಹ ಕಳಚಿ ನಮ್ಮ ಕೈಲಿ ಕೊಡಿ ನಾವು ನಿಮ್ಮ ಮನೆಗೆ ತಲುಪಿಸುತ್ತೆವೆ ಅಂತ ಹೇಳಿದ್ದಾರೆ. ಆಗ ಮುಗ್ಧ ಮಹಿಳೆ ೩ ತೊಲ ಬಂಗಾರವನ್ನು ಖದೀಮರ ಕೈಗೆ ನೀಡುತ್ತಿದ್ದಂತೆ ಮೂವರು ಖದೀಮರು ಅಲ್ಲಿಂದ ಆ ಬಂಗಾರ ಎತ್ತಿಕೊಂಡು ಪರಾರಿಯಾಗಿದ್ದಾರೆ. ಗೋಕಾಕ ನಗರದಲ್ಲಿ ಇತ್ತಿಚಿಗೆ ಮನೆ ಕಳ್ಳತನ, ಚೈನ್ ಸ್ನಾಕಿಂಗ್ ಪ್ರಕರಣಗಳು ತೀರ ಹೆಚ್ಚುತ್ತಿದ್ದು ಪೊಲೀಸರ ಕಾರ್ಯವೈಖರಿ ಪ್ರಶ್ನೆ ಮಾಡುವಂತಾಗಿದೆ…
CKNEWSKANNADA / BRASTACHARDARSHAN CK NEWS KANNADA