Breaking News

ಸಂವಿಧಾನದಷ್ಟೇ ಬಸವಣ್ಣವರ ವಚನಗಳು ಹರಿತವಾಗಿವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ


ಪ್ರಸ್ತುತ ಸಂವಿಧಾನ, ಶೋಷಿತರ, ಅಂಬೇಡ್ಕರ್‌ ವಿಚಾರಗಳ ಮೇಲೆ ದಾಳಿ ನಡೆಯುತ್ತಿದೆ ಎಂದ ಶಾಸಕ ಸತೀಶ್‌ ಜಾರಕಿಹೊಳಿ

ಚಿಕ್ಕೋಡಿ: ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ಬರೆದ ಸಂವಿಧಾನದಷ್ಟೇ ವಿಶ್ವ ಗುರು ಬಸವಣ್ಣವರ ವಚನಗಳು ಹರಿತವಾಗಿವೆ. ಆದಕಾರಣ ಬುದ್ದ, ಬಸವಣ್ಣ, ಡಾ. ಅಂಬೇಡ್ಕರ್‌ ಅವರ ಚಿಂತನೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

 

ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಪ್ರತಿಮೆಯ ಸ್ವರ್ಣ ಮಹೋತ್ಸವ ಹಾಗೂ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ಯ್ರ ಸಿಕ್ಕು 60 ವರ್ಷಗಳ ಅವಧಿಯಲ್ಲಿ ಡಾ. ಅಂಬೇಡ್ಕರ್‌ ಅವರು ಬರೆದ ಸಂವಿಧಾನ ಮೇಲೆ ನಡೆಯದ ದಾಳಿ ಕಳೆದ 10 ವರ್ಷಗಳಲ್ಲಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸ್ತುತ ಸಂವಿಧಾನ, ಶೋಷಿತರ, ಅಂಬೇಡ್ಕರ್‌ ಅವರ ವಿಚಾರಗಳ ಮೇಲೆ ಎಲ್ಲಾ ರೀತಿಯ ದಾಳಿ ನಡೆಯುತ್ತಿದ್ದು, ಅದು ಎಂತಹ ದಾಳಿ ಎಂದರೆ ಕಣ್ಣಿಗೆ ಕಾಣದ ದಾಳಿ. ಕೆಲವು ಕಾನೂನುಗಳನ್ನು ಬದಲಾವಣೆ ಮಾಡುವ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಆದ್ದರಿಂದ ಸಮುದಾಯ, ಸಮುದಾಯದ ಮಕ್ಕಳನ್ನು ಜಾಗೃತಿಗೊಳಿಸುವುದು ಅಗತ್ಯವಿದೆ ಎಂದು ತಿಳಿಸಿದರು.

 

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಸ್ಸಿ, ಎಸ್ಟಿಗಳಿಗೆ ನೀಡಿದ ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿಗೊಳಿಸುತ್ತಿದ್ದು, ಇದನ್ನುಸೂಕ್ಷ್ಮವಾಗಿ ಗಮನಿಸಬೇಕು. ಡಾ. ಅಂಬೇಡ್ಕರ್‌ ವಿಚಾರಗಳು ಎಂದಿನವರೆಗೆ ಜೀವಂತವಾಗಿರುತ್ತವೆಯೋ ಅಂದಿನ ವರೆಗೆ ಮಾತ್ರ ನಾವು ಸ್ವಾಭಿಮಾನದಿಂದ ಬದುಕಲು ಸಾಧ್ಯವಿದೆ ಎಂದು ಹೇಳಿದರು.

 

ನಮ್ಮ ರಾಜ್ಯದಲ್ಲಿ ಅಂಕಿ ಅಂಶಗಳ ಪ್ರಕಾರ ಸುಮಾರು 40 ಸಾವಿರ ದೇವದಾಸಿಯರು ಇದ್ದಾರೆ. ಈ ದೇವದಾಸಿ ಪದ್ದತಿಗೆ ಕೆಲವ ದಲಿತ ಹೆಣ್ಣು ಮಕ್ಕಳು ಏಕೆ ಬಲಿಯಾದರು ಎಂಬುವುದನ್ನು ಅಧ್ಯಯನ ಮಾಡಬೇಕು. ಅಷ್ಟೇ ಅಲ್ಲ ಈ ಅನಿಷ್ಟ ಪದ್ದತಿ ನಿವಾರಣೆಗೆ ಪ್ರತಿಯೊಬ್ಬರು ಪಣ ತೂಡಬೇಕು. ದೇವದಾಸಿ ಪದ್ದತಿ ತಡೆಗೆ ಕಾನೂನಿನಲ್ಲಿ ಅವಕಾಶಗಳಿದ್ದು, ಇಂತಹ ಅನಿಷ್ಟ ಪದ್ದತಿಗೆ ಹೆಣ್ಣು ಮಕ್ಕಳು ಬಲಿಯಾಗುವುದು ನಿಮ್ಮ ಗಮನಕ್ಕೆ ಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದರು.

 

ಪ್ರತಿ ಹಳ್ಳಿಗಳಲ್ಲಿ ಕೆರೆಗಳು ಇವೆ. ಕೆರೆಗಳ ನೀರನ್ನು ದಲಿತರು ಮುಟ್ಟಿದರೆ ಮೈಲಿಗೆ ಆಗುತ್ತೆ ಅಂತಾ ಕೆಲವರು ಹೇಳುತ್ತಾರೆ. ಆದರೆ ಅದೇ ಕೆರೆಗಳಲ್ಲಿ ನಾಯಿ, ಹಂದಿ, ಎಮ್ಮೆ ಹೋಗಿ ಉಳ್ಳಾಡಿ ಬರುತ್ತವೆ. ಆವಾಗ ಮೈಲಿಗೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಕೆಲ ಪದ್ದತಿಗಳ ವಿರುದ್ಧ ಡಾ. ಅಂಬೇಡ್ಕರ್‌ ಮತ್ತು ಬಸವಣ್ಣವರು ಹೋರಾಟ ಮಾಡಿ ದಲಿತರಿಗೆ ಸಮಾನತೆ ನೀಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು.

 

ಪ್ರಸ್ತತ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾದರೆ ಸಂಘಟನೆ ಮಾಡಬೇಕು. ನಮ್ಮದೇ ಆದ ಧರ್ಮವನ್ನು ಕಟ್ಟಬೇಕು. ಡಾ. ಅಂಬೇಡ್ಕರ್‌ ಮತ್ತು ಬಸವಣ್ಣವರ ವಿಚಾರಗಳನ್ನು ನಾವು ತಪ್ಪಿದರೆ ನಮಗೆ ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ಯುವಕರಿಗೆ ತಿಳಿವಳಿಕೆ ನೀಡುವ ಕೆಲಸವಾಗಲಿ, ಡಾ. ಅಂಬೇಡ್ಕರ್‌ ಅವರ ಜಯಂತಿ ಇದೆ ಅಂತಾ ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದರೆ ಪ್ರಯೋಜನೆ ಇಲ್ಲ. ಆದಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.

 

ಗುಡಿ ಕಟ್ಟುವರು, ಮೂರ್ತಿ ಕೆತ್ತುವರು ದಲಿತರು, ಆದರೆ ಕೆಲ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನೀಡಲ್ಲ. ಆದರೆ ಅದೇ ದಲಿತರ ಕಡೆಯಿಂದ ದೇಣಿಗೆ ಪಡೆಯುತ್ತಾರೆ. ತಮ್ಮ ಲಾಭಕ್ಕಾಗಿ ದಲಿತರನ್ನು ಉಪಯೋಗ ಮಾಡುವ ಕೆಲಸವಾಗುತ್ತಿದ್ದು, ಇದನ್ನು ಗಮನಿಸಿ ಸಮುದಾಯವನ್ನು ಎಚ್ಚರಗೊಳಿಸುವ ಕೆಲಸ ಮಾಡಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಯುವ ಜನತೆ ಇಂದು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದಾಗ ಮಾತ್ರ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕನಸು ನನಸಾಗಲು ಸಾಧ್ಯವಿದೆ ಎಂದರು.

 

ಈ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್‌, ವೀರಕುಮಾರ ಪಾಟೀಲ್‌, ಶಾಸಕ ಗಣೇಶ ಹುಕ್ಕೇರಿ, ಮಾಜಿ ಶಾಸಕ ಕಾಕಾ ಸಾಹೇಬ್‌ ಪಾಟೀಲ್‌, ಅಶೋಕ ಅಸೋದೆ, ರಾಜು ವಡ್ಡರ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಅಜೀತ್‌ ಮಳಕಾರಿ, ಉತ್ತಮ ಪಾಟೀಲ್‌, ಕುಮಾರ ಪಾಟೀಲ್‌, ರಾಕೇಶ್‌ ಚಿಂಚಣಿ, ಸತೀಶ್‌ ಪಾಟೀಲ್‌, ವಾಸು ಗಾವಡೆ, ಸಂತೋಷ ಅಂಕಲೆ, ಶಾಂತುನಾಥ ಸ್ವಾಮಿ, ರೋಹಿತ ಯಾದವ್‌ ಸೇರಿದಂತೆ ಇತರರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಪಿನ್ ಕೇರ್ ಬ್ಯಾಂಕ ವತಿಯಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ಆಹಾರ ಧ್ಯಾನ ವಿತರಣೆ!

ಚಿಕ್ಕೋಡಿ: ಪಿನ್ ಕೇರ್ ಬ್ಯಾಂಕ ವತಿಯಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ಆಹಾರ ಧ್ಯಾನ ವಿತರಣೆ ಮತ್ತು covid-19 ಜಾಗೃತಿ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ