ಗೋಕಾಕ: ಬಹಳ ದಿನಗಳ ನಂತರ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಪಟ್ಟಣದಲ್ಲಿ ಹಮ್ಮಿಕೊಂಡಿದ್ದರಿಂದ ಕ್ರೀಡಾ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ GPL-20 ಪ್ರೀಮಿಯರ್ ಲೀಗ್ ಕ್ರಿಕೆಟ್ ನ ಫೈನಲ್ ಪಂದ್ಯವನ್ನು ವೀಕ್ಷಿಸಿ, ಶುಭ ಹಾರೈಸಿ ಮಾತನಾಡಿದ ಅವರು, ಕ್ರೀಡಾ ಅಭಿಮಾನಿಗಳು ಈ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ನೋಡಿ ಖುಷಿ ಪಟ್ಟಿದ್ದು, ಇನ್ನೊಮ್ಮೆ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗುವುದು ಎಂದರು.
ಮೇ 1ರಿಂದ ಆರಂಭವಾದ ಪಂದ್ಯಾವಳಿಗಳು ಕಳೆದ 9 ದಿನಗಳು ನಡೆದು ಇವತ್ತಿಗೆ ಮುಕ್ತಾಯವಾದ್ದು, ಸಾರ್ವಜನಿಕರಿಂದ ಮತ್ತು ಕ್ರಿಡಾಪಟುಗಳಿಂದ ಭಾರೀ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
ಈ ಪಂದ್ಯಾವಳಿಯಲ್ಲಿ “ಬೆಳಗಾವಿ”ತಂಡ ಪ್ರಥಮ ಸ್ಥಾನ ಪಡೆದಿದ್ದು, ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ 50,000 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು. ದ್ವಿತೀಯ ಬಹುಮಾನ ಪಡೆದ ಗೋಕಾಕ್ ತಂಡಕ್ಕೆ 30,000 ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರಾದ ಜುಬರ್ ಮಿರ್ಜಾಬಾಯಿ, ಮಾರುತಿ ಗುಟಗುದ್ದಿ, ಗುತ್ತಿಗೆದಾರ್ ಕಿರಣ್ ಇಟ್ನಾಳ್, ಉದ್ಯಮಿದಾರ್ ಮೋಹನ್ ಶೆಟ್ಟಿ, ಮಹಾಂತೇಶ್ ತಾವಶಿ, ಸತೀಶ್ ಅಕ್ವಾ ಮಾಲೀಕರಾದ ಭರತ್ ದ್ಯಾಮಣ್ಣವರ, ಇಮ್ರಾನ್ ತಪಕೀರ ಹಾಗೂ ಗೋಕಾಕ್ ಕ್ರಿಕೆಟ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.