Breaking News

ಯಮಕನಮರಡಿ ಮತಕ್ಷೇತ್ರದ, ಹಂದಿಗನೂರ ಗ್ರಾಮದಲ್ಲಿ 53 ಲಕ್ಷ ಲೀಟರ್ ನೀರಿನ ಸಾಮರ್ಥಯುಳ್ಳ ಬೃಹತ್‌ ಕೆರೆ ಕಾಮಗಾರಿಗೆ ಚಾಲನೆ


16 ಗ್ರಾಮಗಳ ನೀರಿನ ಬವಣೆ ನೀಗಿಸಿದ ಶಾಸಕ ಸತೀಶ ಜಾರಕಿಹೊಳಿ

 

ಬೆಳಗಾವಿ: “ಈ ಭಾಗದ ಜನತೆಯ ಬಹು ದಿನಗಳ ಕನಸನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಈಡೇರಿಸಿದ್ದು, 16 ಗ್ರಾಮಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಅಂದಾಜು 53 ಲಕ್ಷ ಲೀಟರ್ ನೀರಿನ ಸಾಮರ್ಥಯುಳ್ಳ ಬೃಹತ್‌ ಕೆರೆ ನಿರ್ಮಾಣ ಮಾಡಲಾಗುತ್ತಿದೆ” ಎಂದು ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಹೇಳಿದರು.

 

ಯಮಕನಮರಡಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಹಂದಿಗನೂರ ಗ್ರಾಮದ ಬಳಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇಸಿಗೆ ವೇಳೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಮನಗಂಡ ಶಾಸಕ ಸತೀಶ ಜಾರಕಿಹೊಳಿ ಅವರು ಸತತ ಪರಿಶ್ರಮದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ, ಬೃಹತ್‌ ಯೋಜನೆಯನ್ನು ತಮ್ಮೂರನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ಮಹತ್ವದ ಯೋಜನೆ ಕೈ ಹಾಕಿದ್ದಾರೆ ಎಂದರು.

ಯಮಕನಮರಡಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 16 ಗ್ರಾಮಗಳಿಗೆ ನೀರು ಪೂರೈಕೆಯಾಗಲಿದೆ. ಸುಮಾರು 21 ಎಕರೆ ವ್ಯಾಪ್ತಿಯಲ್ಲಿ ಬೃಹತ್‌ ಕೆರೆ ನಿರ್ಮಾಣವಾಗಲಿದೆ. ಈಗಾಗಲೇ ಕಾಮಗಾರಿಗಾಗಿ ಪ್ರಾಥಮಿಕ ಹಂತದಲ್ಲಿ 60 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿ ಬಳಿಕ ಹೆಚ್ಚಿನ ಅನುದಾನ ತರಲು ಶಾಸಕ ಸತೀಶ ಜಾರಕಿಹೊಳಿ ಶ್ರಮಿಸುತ್ತಿದ್ದಾರೆ ಎಂದರು.

 

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಕೆರೆಯ ಸದುಪಯೋಗವನ್ನು ಗ್ರಾಮೀಣ ಜನತೆ ಪಡೆದುಕೊಳ್ಳಬೇಕು. ಈ ಕಾಮಗಾರಿ ಯಶಸ್ವಿಗೆ ಶ್ರಮಿಸಬೇಕು ಎಂದರು.

 

ಈಗಾಗಲೇ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಹೆಬ್ಬಾಳ, ಗೊಟೂರು ಗ್ರಾಮಗಳು ಸೇರಿದಂತೆ ಎಲ್ಲಾ ಗ್ರಾಮಗಳಿಗೆ ಶುದ್ಧ ನೀರಿನ ಘಟಕದ ಜತೆ, ಮನೆ-ಮನೆಗೆ ನೀರಿನ ನಳಗಳನ್ನು ಅಳವಡಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಹಾಗೂ ಸಿಸಿರಸ್ತೆಗಳು ನಿರ್ಮಾಣವಾಗುತ್ತಿವೆ. ಗ್ರಾಮಗಳ ಅಭಿವೃದ್ದಿಗೆ ಶಾಸಕ ಸತೀಶ ಜಾರಕಿಹೊಳಿ ಮುತರ್ವಜಿವಹಿಸಿ ಕ್ಷೇತ್ರದ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

 

ಈ ಸಂದರ್ಭದಲ್ಲಿ ಇಓ ರಾಜೇಶ ಧಾರವಾಡಕರ್‌, ಸಿಎಓ ಪರಶುರಾಮ ದುಡಗುಂಟ್ಟಿ, ತಾಪಂ ನಿರ್ದೇಶಕ ರಾಜೇಂದ್ರ ಮರಬದ್ದ, ಉಪ ತಹಶೀಲ್ದಾರ ಸದಾಶಿವ ಸೋಳಂಕಿ , ಬಿಜಗತ್ತಿ, ಇಂಜಿನಿಯರ್‌ ಶಿವಾನಂದ ಮಡಿವಾಳರ, ಹಂದಿಗನೂರು ಗ್ರಾಪಂ ಅಧ್ಯಕ್ಷ ಸುರೇಶ ಜಾಧವ , ಉಪಾಧ್ಯಕ್ಷ ಅನಿತಾ ಚೌಗಲೆ, ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ , ಮಾರುತಿ ಸನದಿ, ಜಯಶ್ರೀ ಮಾಳಗಿ, ನಾಗೇಶ ನಾಯಕ, ಲತಾ ಮಾಣೆ, ಜೋತಿಭಾ ಮನವಾಡಕರ್‌, ಮಲ್ಲಪ್ಪಾ ಪಾಟೀಲ, ದತ್ತಾತ್ರೆ ಚೌಗಲೆ, ಸಿ .ಕೆತಳವಾರ ಹಾಗೂ ಇತರರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ