ಗೋಕಾಕ: ಮನುಷ್ಯನ ಜೀವನ ಅಮೂಲ್ಯವಾಗಿದ್ದು, ಜನನ ಮತ್ತು ಮರಣದ ನಡುವೆ ಒಳ್ಳೆಯ ಪರೋಪಕಾರ ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು, ನಗರದ ಸಬ್ ಜೈಲನಲ್ಲಿ ಕರವೇ ಗಜಸೇನೆ ಜಿಲ್ಲಾ ಘಟಕದಿಂದ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದ ಅಂಗವಾಗಿ ವಿಚಾರನಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಟಸಾರ್ವಭೌಮ ಡಾ.ಪುನೀತ ರಾಜಕುಮಾರ ತಮ್ಮ ದುಡಿಮೆಗೆ ಬಂದ ಹಣವನ್ನು ಅರ್ಧದಷ್ಟು ಧಾನ ಧರ್ಮಗಳನ್ನು ಮಾಡುವ ಮೂಲಕ ರಾಜ್ಯದ ಜನಮನದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ನಾವುಗಳು ಸಹ ಇನ್ನೊಬ್ಬರಿಗೆ ನೆರವಾಗುವ ಮೂಲಕ ಜನರ ಮನದಲ್ಲಿ ಸ್ಥಾನ ಪಡೆಯಲು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಂಧಿಖಾನೆ ಇಲಾಖೆಯ ಕಾರಾಗೃಹ ಅಧೀಕ್ಷಕಿ ಲಕ್ಷ್ಮಿ ಹಿರೇಮಠ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕರವೇ ಗಜಸೇನೆ ಜಿಲ್ಲಾ ಅಧ್ಯಕ್ಷ ಪವನ ಮಹಾಲಿಂಗಪೂರ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಪಾಟೀಲ, ಉಪಾಧೀಕ್ಷಕ ಎ ಕೆ ಅನ್ಸಾರಿ ಇದ್ದರು.
ಕಾರಾಗೃಹ ವಿಕ್ಷಕ ಶಕೀಲ್ ಜಕಾತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.