ಅಡವಿ ಸಿದ್ದೇಶ್ವರ ಮಠಕ್ಕೆ 100ಕುರ್ಚಿ ಹಾಗೂ ಸೌಂಡ್ ಸಿಸ್ಟಮ್ ವಿತರಣೆ
ಕುಂದರಗಿ: ಸಹಾಯ ಹಾಗೂ ಸಹಕಾರ ನೀಡುವಲ್ಲಿ ಹಾಗೂ ನೊಂದವರ ಬಾಳಿಗೆ ಬೆಳಕಾಗಿರುವ ಶಾಸಕ ಸತೀಶ ಜಾಕಿಹೊಳಿ ಅವರ ಕಾರ್ಯ ಶ್ಲಾಘನಿಯವಾಗಿದೆ. ಎಂದು ಅಡವಿ ಸಿದ್ದೇಶ್ವರ ಮಠದ ಶ್ರೀ.ಮ.ನಿ.ಪ್ರ. ಅಮರ ಸಿದ್ದೇಶ್ವರ ಮಹಾಸ್ವಾಮಿಜಿ ಅವರು ಹೇಳಿದರು
ಗೋಕಾಕ ತಾಲೂಕಿನ ಕುಂದರಗಿ ಗ್ರಾಮದಲ್ಲಿರುವ ಅಡವಿಸಿದ್ದೇಶ್ವರ ಮಠಕ್ಕೆ ಸತೀಶ ಜಾರಕಿಹೊಳಿ ಪೌಂಡೇಶನ ವತಿಯಿಂದ 100 ಕುರ್ಚಿ ಹಾಗೂ ಸೌಂಡ ಸಿಸ್ಟಮ ನೀಡುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ ನಮ್ಮ ಮಠಕ್ಕೆ 100 ಕುರ್ಚಿ ಹಾಗೂ ಸೌಂಡ ಸಿಸ್ಟಮ್ ಅವಶ್ಯವಿದೆ ಎಂದು ಹೇಳಿದ ತಕ್ಷಣವೇ ಶಾಸಕ ಸತೀಶ ಜಾರಕಿಹೊಳಿ ಸೂಚನೆ ಮೇರೆಗೆ ಯುವ ನಾಯಕ ರಾಹುಲ ಜಾರಕಿಹೊಳಿ ನಮ್ಮ ಮಠಕ್ಕೆ 100 ಕುರ್ಚಿ ಹಾಗೂ ಸೌಂಡ ಸಿಸ್ಟಮ್ ನೀಡಿದ್ದಾರೆ. ಪ್ರವಾಹ ಹಾಗೂ ಕರೋನಾ ಸಂದರ್ಭದಲ್ಲಿಯು ಮಠಕ್ಕೆ ಸತೀಶ ಜಾರಕಿಹೊಳಿ ಪೌಂಡೇಶನ ವತಿಯಿಂದ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳಿದರು
ಈ ವೇಳೆ ಯುವನಾಯಕ ರಾಹುಲ ಜಾರಕಿಹೊಳಿ ಮಾತನಾಡಿ ಸತೀಶ ಜಾರಕಿಹೊಳಿ ಪೌಂಡೇಶನ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದ್ದು ಮಠಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೆ ಇನ್ನೀತರ ಜನರ ಅನಾರೋಗ್ಯ ಸಮಸ್ಯೆಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಂದರು
ಈ ಸಂದರ್ಭದಲ್ಲಿ ಫಜಲ್ ಮಕಾನದಾರ, ಅಲ್ಲಾಖಾನ ಅರಳಿಕಟ್ಟಿ, ಮಹೇಂದ್ರ ಪತ್ತಾರ, ರಾಜು ಪೂಜೇರಿ, ಅಮರ ಉಮನಾಬಾದಿಮಠ, ವಿನೋದ ಉಮನಾಬಾದಿಮಠ, ಸರಫರಾಜ ಪಿರಜಾದೆ, ಅಬ್ದುಲಗಣಿ ದರ್ಗಾ,ಮೇಹಬೂಬ ದೇಸಾಯಿ, ಶಾನೂಲ ದೇಸಾಯಿ, ದಸ್ತಗೀರ ಅರಳಿಕಟ್ಟಿ, ಅಮೀರ ಹಮಜಾ ಸೇರಿದಂತೆ ಮುತಾಂದವರು ಇದ್ದರು